
ಕಾನನದ ನಡುವಲ್ಲಿಹೊಂಗೇ ಮರ ತುದಿಯಲ್ಲಿಕಾಣುತಿದೆ ಹಕ್ಕಿಯ ಗೂಡು.ಹಿಡಿದು ಹೊರಟಾಗ ಜಾಡು,ಕಾಣುತಿದೆ ಹಕ್ಕಿಯ ಗೂಡು.
ಪುಟ್ಟ ಹಕ್ಕಿಯೊಂದುಮೊಟ್ಟೆಗಳ ಇಟ್ಟಿತ್ತು.ಕಾವ ಕೊಡುವ ನಡುವೆ,ಆಹಾರ ಹುಡುಕಿ ಹೊರಟಿತ್ತು.ಆ ಹಕ್ಕಿಯ ದಿನಚರಿಯು,ಹೀಗೆ ಪ್ರತಿದಿನವೂ ನಡೆದಿತ್ತು.
ಅಮಾವಾಸ್ಯೆ ಕಳೆದು,ಪೂರ್ಣ ಚಂದಿರನು ಬಂದ.ಮೊಟ್ಟೆಯೊಡೆದು ಬಂದಪುಟ್ಟಮರಿಗಳಾ ಕಂಡು,ತಾಯಿಹಕ್ಕಿಗಾಯ್ತು ಆನಂದ.ಹಕ್ಕಿಗಾಯ್ತು ಆನಂದ, ತನ್ನಮರಿಗಳ ಕಂಡು ಪರಮಾನಂದ.
ಎರಡೂ ರೆಕ್ಕೆಗಳನಗಲಿಸಿ,ತನ್ನ ಮರಿಗಳ ಬಾಚಿ ತಬ್ಬಿ,ತಾಯ್ತನದ ಸುಖ ಅನುಭವಿಸಿತು."ನಿನ್ನ ಮುದ್ದು ಹಾಗೀರಲಿ,ಗುಟುಕೊಂದು ನೀಡಮ್ಮಾ" ಎಂದುಬಾಯ್ತೆರೆದ ಮರಿಗಳ ಕಂಡಾಗಲೇರೆಕ್ಕಿ ಬಿಚ್ಚಿ ಮತ್ತೆ ಹೊರಟಿತ್ತು.ಆಹಾರ ತರಲು ಹೊರಟಿತ್ತು..!!
ಆ ಎಳೆಯ ಮರಿಗಳಿಗೆ,ಹೊತ್ತುಹೊತ್ತಿಗೂ ತುತ್ತುತರಲೆಂದು ಬಾನಿಗೆ ಜಿಗಿದಿತ್ತು,ಹಾರುತಾ ದೂರ ಸಾಗಿತ್ತು.ದೂರದೂರಕೂ ಹಾರಿ,ಸಿಕ್ಕಸಿಕ್ಕದನ್ನೆಲ್ಲಾ ತಾನೆಕ್ಕಿ ತಂದು,ಆ ಮರಿಗಳಿಗೆ ಗುಟುಕು ನೀಡುತ್ತಿತ್ತು.ತನ್ನ ಮರಿಗಳ ಹಸಿವು ನೀಗಿಸುತ್ತಿತ್ತು.ನಿತ್ಯವೂ ಈ ಕಾಯಕ ನಡೆಯುತ್ತಿತ್ತು.
ದಿನಗಳ ಮೇಲೆದಿನಗಳುರುಳಿದಾ ಮೇಲೆಮರಿಹಕ್ಕಿಗಳ ರೆಕ್ಕೆ ಬಲಿಯುತ್ತಿತ್ತು.ತನ್ನ ಮರಿಗಳಿಗೆಂದೆಎಲ್ಲಿಂದಲೋ ತಂದ ಹುಪ್ಪಡಿಯನೀಡುವ ತವಕದಲಿ ಗೂಡಿನಹತ್ತಿರದಲಿ ಹಾರುತಾ ಬರುತ್ತಿತ್ತು.ಅಷ್ಟರಲ್ಲಿ ಪುಟ್ಟ ಪೋರನೊಬ್ಬಬೀಸಿದ ಕಲ್ಲು ಎದೆಗೆ ಬಡಿದಿತ್ತು.
ಗೂಡಿನ ಹತ್ತಿರದಲ್ಲೇಬಿದ್ದ ಹಕ್ಕಿಗೆ ಕೂಗಲಾಗುತ್ತಿಲ್ಲ.ಅಮ್ಮ ತರುವ ತುತ್ತಿಗೆಂದುಬಾಯ್ತೆರೆದು ಕೂಗುತಿರುವಮರಿಗಳಿಗೆ ಗುಟುಕು ನೀಡಲಾಗುತ್ತಿಲ್ಲ.ಆ ಪುಟ್ಟ ತಾಯಿಹಕ್ಕಿಯಹೃದಯದಲ್ಲಾದ ನೋವಿಗೆಕಣ್ಣೀರ ಹನಿ ಜಿನುಗುತಿತ್ತು.
ಪ್ರಕಟಣೆ: 22 ಜುಲೈ 2020 · © ರಾಘವೇಂದ್ರ ಪದ್ಮಶಾಲಿ


