ಮುಖ್ಯ ವಿಷಯಕ್ಕೆ ಹೋಗಿ
ರಾಘವೇಂದ್ರ ಪದ್ಮಶಾಲಿRaghavendra Padmashali
ಜೀವನ

ನಾನೊಂದು ಒಂಟಿಮರ

Naanondu Ontimara

— Raghavendra Padmashali

1 ನಿಮಿಷದ ಓದು

ನಾನೊಂದು ಒಂಟಿಮರನಾನಾಗಿ ಹೋದೆ ಒಂಟಿ ಮರ.

ಹಚ್ಚಹಸಿರ ರಾಶಿ ಹೊತ್ತುಜಗಮಗಿಸುತ್ತಿದ್ದೆ ನಾನು,ಆದರೀಗ ಹಸಿರೆಲೆಯೇ ಇಲ್ಲ.ಅಲ್ಲೆಲ್ಲೋ ಹಾರುವದುಂಬಿಯನು ಸೆಳೆಯುತ್ತಿತ್ತು,ನನ್ನೊಳಗಿನ ಹೂಗಳ ರಾಶಿ.ಆದರೀಗ ನಗುವ ಕುಸುಮವಿಲ್ಲ.

ನನ್ನದೆ ಕೊಂಬೆಗಳಲಿಮನೆ ಮಾಡಿ, ಚೀಂವ್ ಚೀಂವ್ಎಂದು ಅತ್ತಿತ್ತ ಓಡಾಡಿನಗುತ್ತಾ ನಲಿಯುತ್ತಿದ್ದ ಅಳಿಲುಮರಿ.ಕಿಲಕಿಲ ಕಲರವ ಮಾಡುತಾ,ಜೋಡಿಹಕ್ಕಿಗಳಾಗಿ ಸೇರಿ,ಮೆರೆಯುತಾ ಉಲಿವ ಹಕ್ಕಿಗಳಿಲ್ಲ.

ಸಿಡಿಲು-ಗುಡುಗಿಗೂಬೆಚ್ಚದೆಯೇ ಕೆಚ್ಚೆದೆಯ ನಿಂತಿದ್ದನನಗೀಗ ವರುಣನೂ ಜೊತೆಗಿಲ್ಲ.ನನ್ನ ಕಂಡಾಗಲೆಲ್ಲ,ಕಾಲೆತ್ತಿ ನನ್ನ ಬುಡಕ್ಕೆನೀರು ಹಾಯಿಸುತ್ತಿದ್ದ ನಾಯಿಕುನ್ನಿಗೂ ಈಗ ನಾ ಬೇಕಾಗಿಲ್ಲ.

ನನ್ನ ನೆರಳಲ್ಲಿ ಕೂತು,ಅದೆಷ್ಟೋ ಪ್ರೇಮಿಗಳುಹಂಚಿಕೊಂಡ ಪಿಸುಮಾತುಗಳಿಲ್ಲ.ಬದುಕಿನಲಿ ನೊಂದು,ಬಾಳಸಂಜೆಯ ಕ್ಷಣಗಳಲಿ,ಮೌನದಿ ಅತ್ತು ನೊಂದವರು ಈಗಿಲ್ಲ.

ಎಲ್ಲವನೂ ಕಳೆದುಕೊಂಡುನನ್ನ ಬದುಕು ನೀರಸವಾದಂತ್ತಿದ್ದರೂ,ಮತ್ತೆ ಚಿಗುರುವ ಆಸೆ ನನ್ನಲ್ಲಿದೆ,ಮತ್ತೆ ಬದುಕಿ, ನಗುವಾಸೆ ನನ್ನಲ್ಲಿದೆ.ಆ ಸಂಭ್ರಮದ ಕ್ಷಣಗಳು ಬರಲು ಕಾರಣಋತುರಾಜ ವಸಂತನಿಗೆನನ್ನ ಮೇಲೆಯೇ ಅದಮ್ಯ ಪ್ರೀತಿಯಿದೆ.

ಹಂಚಿಕೊಳ್ಳಿ

ಪ್ರಕಟಣೆ: 31 ಜುಲೈ 2018 · © ರಾಘವೇಂದ್ರ ಪದ್ಮಶಾಲಿ

ಓದುಗರ ಅನಿಸಿಕೆಗಳು

    ನಿಮ್ಮ ಅನಿಸಿಕೆ ಬರೆಯಿರಿ

    ಜೀವನ

    ಅಪ್ಪ ಕೊಡಿಸಿದ ಸೈಕಲ್ಲು

    ಸೀಟಲಿ ಕುಳಿತು, ಪೆಡಲ್ಲು ತುಳಿಯುತಾ ಟ್ರಿಣ್‌ ಟ್ರಿಣ್‌ ಬೆಲ್ಲು ಸದ್ದನು ಮಾಡುತಾ ಸೊಯ್ಯನೇ ಹೊರಟೆ ಸೈಕಲ್ಲು ಏರುತಾ ಅಪ್ಪ ಕೊಡಿಸಿದ ಸೈಕಲ್ಲು ತುಳಿಯುತಾ

    1 ನಿಮಿಷದ ಓದು21 ಓದುಗರು

    ಜೀವನ

    ಬಲು ಬೆಚ್ಚನೆಯ ಪ್ರೀತಿ

    ಮೃದುಲ ತುಟಿಗಳ ತಾಕಿಸಿ ಹರೆಯ ಬಿಸಿಯುಸಿರ ಸೇರಿಸಿ ನಾನೇನೋ ನಿನ್ನ ಎಳೆದುಬಿಟ್ಟೆ ಮೈಯೆಲ್ಲಾ ಬೆಚ್ಚಗಾಗಿಸಿ

    2 ನಿಮಿಷದ ಓದು1 ಓದುಗರು