ಮುಖ್ಯ ವಿಷಯಕ್ಕೆ ಹೋಗಿ
ರಾಘವೇಂದ್ರ ಪದ್ಮಶಾಲಿRaghavendra Padmashali
ಜೀವನ

ಬಲು ಬೆಚ್ಚನೆಯ ಪ್ರೀತಿ

Balu Bechchaneya Preethi

— Raghavendra Padmashali

2 ನಿಮಿಷದ ಓದು

ಮೃದುಲ ತುಟಿಗಳ ತಾಕಿಸಿಹರೆಯ ಬಿಸಿಯುಸಿರ ಸೇರಿಸಿನಾನೇನೋ ನಿನ್ನ ಎಳೆದುಬಿಟ್ಟೆಮೈಯೆಲ್ಲಾ ಬೆಚ್ಚಗಾಗಿಸಿಮನಸ್ಸೆಲ್ಲಾ ಪ್ರಫುಲ್ಲವಾಗಿಸಿನೀನೇನೊ ನನ್ನ ಒಳಸೇರಿಬಿಟ್ಟೆ

ನನ್ನ ಮನದೊಳಗಿನ ನೋವು,ದುಗುಡ ದುಃಖ ದುಮ್ಮಾನವೆಲ್ಲಾನೀ ಸುಟ್ಟು ಬೆಳ್ಳಿಧೂಪವಾಗಿಸಿಮೆಲ್ಲನೇ ಹೊರ ಬರುತಿರಲುಮತ್ತ್ಯಾವ ಸ್ವರ್ಗವೂ ಬೇಡಎಂದೆನಿಸುವಂತೆ ಮಾಡಿಬಿಟ್ಟೆ.

ನೀ ಜೊತೆಗಿದ್ದಷ್ಟು ಹೊತ್ತುಎಲ್ಲವನೂ ಮರೆಸಿಬಿಟ್ಟೆ,ಯಾರೂ ಬೇಡ ಎನಿಸಿಬಿಟ್ಟೆ,ಪದೆಪದೇ ನೆನಪಾದ ನಿನ್ನತುಟಿಯಂಚಲಿ ಆಲಂಗಿಸಿ,ನಾ ಕಿಚ್ಚು ಹೊತ್ತಿಸಿಬಿಟ್ಟೆ,ಇದೇ ಸಲುಗೆಯಲಿ,ಮತ್ತದೇ ಖುಷಿಯಲ್ಲಿ, ನೀನನ್ನ ಮತ್ತೆ ಸೋಲಿಸಿಬಿಟ್ಟೆ,ನೀನಿಲ್ಲದೇ ನಾ ಬದುಕಲಾರೆಎನ್ನುವಂತಾಗಿಸಿಬಿಟ್ಟೆ.

ಇದೆಂತಾ ಮೋಹವೋ ನಾ ಕಾಣೆ,ಆಗಾಗ ಸೇರುತ್ತಿದ್ದ ನಾವು,ದಿನಕ್ಕೊಮ್ಮೆ ಸೇರುವಂತಾದೆವು,ಘಳಿಗೆಗೊಮ್ಮೆಯೂ ಸೇರುವಂತಾದೆವು.ಈ ಜೋಂಪಿನಲಿ, ಈ ಅಮಲಿನಲಿ,ಎಲ್ಲ ಮರೆತು ಹಾಗೇ ತೇಲುತಲಿಅತಿಯಾದರೆ ಅಮೃತವೂ ವಿಷವೆಂಬಸತ್ಯವನು ಇಬ್ಬರೂ ಮರೆತೆವು.ಎಂದೂ ಮರೆಯದ ಪಾಠವ ಕಲಿತೆವು.

ನೆಮ್ಮದಿಯಿಂದ ಉಸಿರಾಡಲು ಕಷ್ಟವಾಗಿಸಿ,ಭವಿಷ್ಯದ ದಿನಗಳ ಕನಸು ಮಂಜಾಗಿಸಿ,ನೀನಿದ್ದ ಎದೆಗೂಡು ಹೊಗೆಗೂಡಾಯಿತು.ನನ್ನ ಖುಷಿಗಾಗಿ ನೀ ಕೊಟ್ಟ ಬೆಚ್ಚಗಿನ ಪ್ರೀತಿಇಂದು ಕಡುಕಪ್ಪಿನ ಇಂಗಾಲವಾಯಿತು.ಈ ಲೋಕದಲಿ ನನ್ನನೂ ನಾ ಮರೆತು,ನಿನ್ನ ನಂಬಿದ್ದೇ ಈಗ ಮುಳುವಾಯಿತು.ನನಗಾಗಿ, ನನ್ನವರ ಹಿತಕ್ಕಾಗಿ,ನಾ ಕಂಡ ಕನಸುಗಳೆಲ್ಲವೂ ಈಗಹೇಳದೇ ಕೇಳದೆ ಮಸಣವನೂ ಸೇರಿತು.

ಪ್ರೀತಿಯೇ ಇರಲಿ, ದ್ವೇಷವೇ ಇರಲಿ,ಮಮಕಾರವೇ ಇರಲಿ, ಅಪಕಾರವೇ ಆಗಲಿ,ಇಷ್ಟವೇ ಇರಲಿ, ಕಷ್ಟವೇ ಆಗಿರಲಿ,ಖುಷಿಯೇ ಇರಲಿ, ನಂಬಿಕೆಯೇ ಇರಲಿ,ಕೋಪವೇ ಇರಲಿ, ತಾಳ್ಮೆಯೇ ಇರಲಿ,ಯಾರೊಬ್ಬರಲ್ಲೂ ಇದುಯಾವುದೂ ಅತಿಯಾಗದೇ ಇರಲಿ.ಅತಿಯಾದರೆ ಯಾವುದೂಒಳ್ಳೇಯದಲ್ಲವೆಂಬುದು ನೆನಪಿರಲಿ.

ಹಂಚಿಕೊಳ್ಳಿ

ಪ್ರಕಟಣೆ: 16 ಫೆಬ್ರವರಿ 2022 · © ರಾಘವೇಂದ್ರ ಪದ್ಮಶಾಲಿ

ಓದುಗರ ಅನಿಸಿಕೆಗಳು

    ನಿಮ್ಮ ಅನಿಸಿಕೆ ಬರೆಯಿರಿ

    ಜೀವನ

    ಅಪ್ಪ ಕೊಡಿಸಿದ ಸೈಕಲ್ಲು

    ಸೀಟಲಿ ಕುಳಿತು, ಪೆಡಲ್ಲು ತುಳಿಯುತಾ ಟ್ರಿಣ್‌ ಟ್ರಿಣ್‌ ಬೆಲ್ಲು ಸದ್ದನು ಮಾಡುತಾ ಸೊಯ್ಯನೇ ಹೊರಟೆ ಸೈಕಲ್ಲು ಏರುತಾ ಅಪ್ಪ ಕೊಡಿಸಿದ ಸೈಕಲ್ಲು ತುಳಿಯುತಾ. || ೧ ||

    1 ನಿಮಿಷದ ಓದು12 ಓದುಗರು

    ಪ್ರೀತಿ

    ಅಮ್ಮ ಬಿಟ್ಟು ಹೋದ ದಿನ..

    ಜಗದ ಋಣ ತೀರಿತೆಂದು ಅಂದು ಅಮ್ಮ ಬಿಟ್ಟುಹೋದ ದಿನ ಸಾಕೆನಿಸದಷ್ಟು ಹೊತ್ತು ಅತ್ತಿದ್ದೇನೆ, ಬಹಳವಾಗಿ ನೊಂದಿದ್ದೇನೆ,

    3 ನಿಮಿಷದ ಓದು1 ಓದುಗರು