ಮುಖ್ಯ ವಿಷಯಕ್ಕೆ ಹೋಗಿ
ರಾಘವೇಂದ್ರ ಪದ್ಮಶಾಲಿRaghavendra Padmashali

ಅಪ್ಪ ಕೊಡಿಸಿದ ಸೈಕಲ್ಲು

A Bicycle present by Dad

— Raghavendra Padmashali

1 ನಿಮಿಷದ ಓದು1 ಓದುಗರು

ಸೀಟಲಿ ಕುಳಿತು, ಪೆಡಲ್ಲು ತುಳಿಯುತಾಟ್ರಿಣ್‌ ಟ್ರಿಣ್‌ ಬೆಲ್ಲು ಸದ್ದನು ಮಾಡುತಾಸೊಯ್ಯನೇ ಹೊರಟೆ ಸೈಕಲ್ಲು ಏರುತಾ ಅಪ್ಪ ಕೊಡಿಸಿದ ಸೈಕಲ್ಲು ತುಳಿಯುತಾ. || ೧ ||

ಅಮ್ಮನಿಗಾಗಿ ಇಡ್ಲಿ ರವೆಯನು ತಂದೆ, ಅಪ್ಪನಿಗಾಗಿ ನ್ಯೂಸ್‌ ಪೇಪರು ತಂದೆ,ಖುಷಿಯಲಿ ಗೆಳೆಯನ ಮನೆಗೇ ಬಂದೆ,ಇದು ಅಪ್ಪ ಕೊಡಿಸಿದ ಸೈಕಲ್ಲು ಎಂದೆ. || ೨ ||

ಗೆಳೆಯರ ನಡುವೆ ನಮ್ಮ ಸೈಕಲ್‌ ರೇಸು, ಗೆಳೆತಿಯರ ಮುಂದೆ ಸುಮ್ನೇ ಪೋಸು.ಖುಷಿಯಲಿ ಕುಣಿಯುತಾ ಸೈಕಲ್‌ ಓಡಿಸು, ನನ್ನ ನೋಡಿ ನಲಿಯಿತು ಅಪ್ಪನ ಮನಸು. || ೩ ||

ಹಂಚಿಕೊಳ್ಳಿ

ಪ್ರಕಟಣೆ: 12 ಅಕ್ಟೋಬರ್ 2026 · © ರಾಘವೇಂದ್ರ ಪದ್ಮಶಾಲಿ

ಓದುಗರ ಅನಿಸಿಕೆಗಳು (1)

  • Code Smart IT Solutions · 12 ಅಕ್ಟೋಬರ್ 2026

    ಚಂದವಿದೆ

ನಿಮ್ಮ ಅನಿಸಿಕೆ ಬರೆಯಿರಿ