ಹೆಣ್ಣ ಕಣ್ಣೀರಲಿ ಏನ್ ಅಡಗಿದೆಯೋ..!!
Henna Kanneerali Enenu Adagideyo
— Raghavendra Padmashali
2 ನಿಮಿಷದ ಓದು1 ಓದುಗರು

ದೇವರೇ, ಈ ಹೆಣ್ಣಿನಾ ಕಣ್ಣೀರಲಿ ನೀಏನೆಲ್ಲಾ ಅಡಗಿಸಿರುವೆಯೋ ಕಾಣೇ..!!
ಒಮ್ಮೆ ಧಾರವಾಹಿಯೊಳಗಿನಸಖಿ (ನಟಿ) ಅಳುತಿರುವಳೆಂತಲೂ,ಒಮ್ಮೆ ಈರುಳ್ಳಿ ಕತ್ತರಿಸಿದಲೆಂತಲೂ,ಅಡುಗೆ ಮಾಡಿ ರೋಸಿಹೋದೆನ್ನುತಲೂ,ಪಾತ್ರೆ ತಿಕ್ಕಿ ತಿಕ್ಕಿ ಸೊರಗಿದೆಯೆನ್ನುತಲೂ,ಒಮ್ಮೆ ತನಗೊಪ್ಪುವಾ ಹೊಸ ಸೀರೆ,ಒಡವೆಯ ನಲ್ಲ ಕೊಡಿಸಿಲ್ಲವೆಂತಲೂ,
ಸಿನಿಮಾ ಹೀರೋ ಪ್ರೀತಿಸುವ ರೀತಿಕೈಹಿಡಿದ ರಾಯ ಮುದ್ದಿಸುತ್ತಿಲ್ಲವೆಂತಲೂ,ವಾರದ ಷಾಪಿಂಗ್ ಕರೆದೊಯ್ದಿಲ್ಲವೆಂತಲೂ,ಇಷ್ಟದ ತಿಂಡಿ-ತಿನಿಸು ಕೊಡಿಸಿಲ್ಲವೆಂತಲೂ,ತಾನು ಪಕ್ಕದಲ್ಲಿದ್ದರೂ, ಇನ್ಯಾರೋ ಸುಪ್ನಾತಿಸುಂದರಿ ಕಡೆ ನಲ್ಲ ನೋಡುತ್ತಾನೆಂತಲೂ,ನೀನೆ ಚಂದ, ನೀನೇ ಮಕರಂದ ಎಂದೂತನ್ನ ಎದೆಗಪ್ಪಿಕೊಂಡ ಗಂಡ ಕೊನೆವರೆಗೂಸಾಗರದಷ್ಟು ಪ್ರೀತಿಸುತ್ತಲೇ ಇರಬೇಕೆನ್ನುತಲೂ,
ವಯೋಸಹಜ ಕಾಲುನೋವೆನ್ನುತಲೂ,ಬೇಡದ ಖಾಯಿಲೆಯಿಂದ ನರಳುತ್ತಲೂ,ದೂರಾದ ಬಂಧುಗಳ ನಿತ್ಯ ಶಪಿಸುತ್ತಲೂ,ಗೂಡು ತೊರೆದ ಮಕ್ಕಳ ನೆನೆಯುತ್ತಲೂ,ಅಂದು ಆಡಿ ಬೆಳೆದ ತವರ ನೆನೆದಾಗಲೂ,ಪ್ರೀತಿಯ ಅಪ್ಪ-ಅಮ್ಮನ ನೆನಪಾದಾಗಲೂ,ಗಂಡನಿಗೋ, ಮಕ್ಕಳಿಗೋ ಹೇಗೋಏನೋ ಒಂಚೂರು ನೋವಾಯಿತೆಂತಲೂ,
ಒಮ್ಮೆ ತುಂಬ ಖುಷಿಯಿಂದಲೂ,ಒಮ್ಮೆ ನೋವಾಗಿದೆಯೆಂತಲೂ,ಹೃದಯದೊಳಗಿನ ಪ್ರೀತಿಯ ತಿಳಿಸಲು,ಮನಸಾರೆ ಒಂಚೂರು ಅತ್ತು ಅತ್ತುಎದೆಯೊಳಗಿನ ನೋವ ಮರೆಸಲು,ನಮ್ಮ ಈ ಹೆಣ್ಣು ಕಣ್ಣೀರ ಸುರಿಸುವಳು.ಕಣ್ಣೀರ ಒರೆಸುವ ಕೈಗಾಗಿ ಹಂಬಲಿಸುವಳು.ಬಾಚಿತಬ್ಬಿ ಸಂತೈಸುವ ಎದೆಗಾಗಿ ಕಾಯುವಳು.ಅವಳ ಮನಸ ಅರ್ಥ ಮಾಡಿಕೊಂಡ ಜೀವಜೊತೆಗಿರಲು ಖುಷಿ ಹೆಚ್ಚಿ ನಲಿಯುವಳು.
ಅವಳ ಕಣ್ಣೀರಿಗೆ ಕಾರಣಗಳೇನೇ ಇರಲಿ,ಆ ಹೆಣ್‌ಮನಸನ್ನ ಅರ್ಥ ಮಾಡಿಕೊಂಡಆತ್ಮೀಯ ಜೀವ ನಾವಾಗಿರಲಿ...
ಪ್ರಕಟಣೆ: 1 ಡಿಸೆಂಬರ್ 2021 · © ರಾಘವೇಂದ್ರ ಪದ್ಮಶಾಲಿ


