ಮುಖ್ಯ ವಿಷಯಕ್ಕೆ ಹೋಗಿSkip to content
ಸಮಾಜSociety

ತಪ್ಪೆಲ್ಲಾ ನಮ್ದೇ...

Tappella Namde

— Raghavendra Padmashali

1 ನಿಮಿಷದ ಓದು1 min read1 ಓದುಗರು1 reader

ಇದೆಂಥಾ ಭ್ರಷ್ಟ ಸರಕಾರವೋಎಂದು ಸದಾ ನಿಂದಿಸುವ ನಾವು,ಅವ ಕೊಟ್ಟ ಸಾವಿರದ ನೋಟನ್ನುಕಿಸೆಯೊಳಗಿಟ್ಟುಕೊಂಡು ಆರಿಸಿ,ಮಂತ್ರಿಗಳಾಗಿಸಿದ್ದನ್ನು ಮರೆತಿದ್ದೇವೆ.

ಒಳ್ಳೆಯ ಸಿನಿಮಾಗಳೇ ಬರುತ್ತಿಲ್ಲಎಂದು ಬಡಬಡಿಸುವ ನಾವು,ಕ್ಯಾಟು ವಾಕು, ಪೋಲಿ ಜೋಕು,ಅರೆಬೆತ್ತಲೆಯ ಐಟಂ ಸಾಂಗಿಗೆಜೋತುಬಿದ್ದು, ಅವನ್ನೇ ಹೆಚ್ಚಾಗಿಗೆಲ್ಲಿಸುತ್ತಿರುವುದನ್ನು ಮರೆತಿದ್ದೇವೆ.

ಒಪ್ಪೊತ್ತಿನ ಊಟ ಸಿಗದೇ, ಕೃಶವಾಗಿಅಲೆವ ಜೀವಕೆ ಮರುಕಪಡುವ ನಾವು,ಕರೆದ ಸಭೆ - ಸಮಾರಂಭಗಳಲಿ,ತಟ್ಟೆ ತುಂಬಿಸಿಕೊಂಡು, ಅರ್ಧದಷ್ಟನ್ನೇತಿಂದು, ಬೀಡಾ ಹಾಕ್ಕೊಂಡು ಬೀಗುವಾಗಆ ಜೀವಗಳ ಹಸಿವನ್ನೇ ಮರೆತಿದ್ದೇವೆ.

ಅಬ್ಬಾ.. ಏನಿದು ಸೂರ್ಯನ ಕೋಪ,ನಲವತ್ತೂ ದಾಟಿದ ಬಿಸಿಲಿನ ತಾಪ,ಎಂದು ಬೊಬ್ಬೆ ಹೊಡೆಯುವ ನಾವು,ಅಲ್ಲೋ ಇಲ್ಲೋ ಉಳಿದ ಹಸಿರುಮರಗಳನ್ನು ಕಡಿದದ್ದೂ ಅಲ್ಲದೇ, ಹೊಸಸಸಿ ನೆಡದೇ ಕಾರಣರಾಗಿದ್ದನ್ನು ಮರೆತಿದ್ದೇವೆ.

ನೀರನ್ನು ಉಳಿಸಿ, ಮರಗಳನ್ನು ರಕ್ಷಿಸಿ,ಎಂದು ಗುಂಪಲ್ಲಿ ಕೂಗುವ ನಾವು,ಉಳಿಸಿದ್ದಾದರೂ ಏನು, ರಕ್ಷಿಸಿದ್ದಾದರೂ ಏನು..ಎಲ್ಲವೂ ಶೂನ್ಯ, ಭವಿಷ್ಯವೂ ಶೂನ್ಯವೇ..ಇದೆಲ್ಲವೂ ತಿಳಿದು ತಿಳಿದು ಮಾಡಿದ ತಪ್ಪುಗಳೆ.ಅದೇನೆ ಇರಲಿ ಬಿಡಿ... ತಪ್ಪೆಲ್ಲಾ ನಮ್ಮದೇ..

ಹಂಚಿಕೊಳ್ಳಿShare

ಪ್ರಕಟಣೆ: 20 ಅಕ್ಟೋಬರ್ 2026 · © ರಾಘವೇಂದ್ರ ಪದ್ಮಶಾಲಿPublished: 20 October 2026 · © Raghavendra Padmashali

ಓದುಗರ ಅನಿಸಿಕೆಗಳುReader comments

    ನಿಮ್ಮ ಅನಿಸಿಕೆ ಬರೆಯಿರಿLeave a comment

    ಸಮಾಜSociety

    ಭಿಕ್ಷುಕ ನಾನಲ್ಲ

    ಭಿಕ್ಷುಕನು ನಾನಲ್ಲ, ಇವರಂಥಾ ಭಿಕ್ಷುಕನು ನಾನಲ್ಲ..! ಬಡವರ ಹೊಟ್ಟೆಯನು ಬಡಿದು, ದಿನದ ಮಾಮೂಲು

    1 ನಿಮಿಷದ ಓದು1 min read1 ಓದುಗರು1 reader

    ಪ್ರೀತಿLove

    ಯಶೋವರ್ಧನ

    ನನ್ನ ಮುದ್ದಿನ ಯಶೋವರ್ಧನ ನೀನಿದ್ದೋಡೆ ನನಗದೇ ನಂದನವನ ನೀಲಿ ಬಾನಲಿ, ಮುಂಜಾವಿನಲಿ ಮೂಡಲ ಮನೆಯ ಬೆಳಗೋ

    1 ನಿಮಿಷದ ಓದು1 min read1 ಓದುಗರು1 reader

    ಪ್ರೀತಿLove

    ನಾ ಹೇಗೆ ಬಣ್ಣಿಸಲಿ

    ನಾ ಏನಂಥಾ ಬರೆಯಲಿ.. ನಿತ್ಯ ಚಿಗುರುವ ಹಸಿರಂಥಾ ಈ ಪ್ರೀತಿಯ ಹೇಗೆ ಬಣ್ಣಿಸಲಿ.. ಬೆಳಗ್ಗೆ ಎದ್ದಾಗಿನಿಂದ..

    1 ನಿಮಿಷದ ಓದು1 min read