ಭಿಕ್ಷುಕ ನಾನಲ್ಲ
Bhiksuka Naanalla
— Raghavendra Padmashali
1 ನಿಮಿಷದ ಓದು1 min read1 ಓದುಗರು1 reader

ಭಿಕ್ಷುಕನು ನಾನಲ್ಲ,ಇವರಂಥಾ ಭಿಕ್ಷುಕನು ನಾನಲ್ಲ..!ಬಡವರ ಹೊಟ್ಟೆಯನುಬಡಿದು, ದಿನದ ಮಾಮೂಲುಕೇಳುವ ಪೋಲೀಸು ನಾನಲ್ಲ.
ಈಗಲೋ, ಆಗಲೋಸಾಯುವ ರೋಗಿಯನು ಬಿಡದೇ,ರಕ್ತ ಹೀರುವ ಡಾಕ್ಟರೂ ನಾನಲ್ಲ.ಪ್ರಜಾಹಿತವ ಬದಿಗೊತ್ತಿ,ಕೋಟಿಕೋಟಿ ಹಣ ಕೊಳ್ಳೆ ಹೊಡೆವ,ಡೊಳ್ಳುಹೊಟ್ಟೆ ರಾಜಕಾರಣಿ ನಾನಲ್ಲ.
ಸಾವಿರಾರು ರೂಪಾಯಿಪಗಾರ ಬಂದ್ರೂ, ಲಂಚಕ್ಕಾಗಿಕೈಯೊಡ್ಡೋ, ಸರ್ಕಾರಿ ನೌಕರ ನಾನಲ್ಲ.ಬಿಸಿಲು ಧೂಳಲ್ಲಿ ಕೂತು,ಬೇಡಿ ಪಡೆದ ಚಿಲ್ಲರೆ ಕಾಸು,ಸಾಕು ನನ್ ಹೊಟ್ಟೆ ತಣ್ಣಗಿಡಲು.
ಇರುಳೆಲ್ಲಾ ಸಿಹಿಗನಸು,ಕಣ್ಗಳಲಿ ಸವಿ ನಿದಿರೆ ಸೊಗಸು,ನಿಜ, ಭಿಕ್ಷುಕನು ನಾನಲ್ಲ,ಇವರಂಥಾ ಭಿಕ್ಷುಕನು ನಾನಲ್ಲ...!
ಪ್ರಕಟಣೆ: 20 ಅಕ್ಟೋಬರ್ 2026 · © ರಾಘವೇಂದ್ರ ಪದ್ಮಶಾಲಿPublished: 20 October 2026 · © Raghavendra Padmashali


