ಮುಖ್ಯ ವಿಷಯಕ್ಕೆ ಹೋಗಿSkip to content
ಪ್ರೀತಿLove

ಯಶೋವರ್ಧನ

Yashovardhan

— Raghavendra Padmashali

1 ನಿಮಿಷದ ಓದು1 min read1 ಓದುಗರು1 reader

ನನ್ನ ಮುದ್ದಿನ ಯಶೋವರ್ಧನನೀನಿದ್ದೋಡೆ ನನಗದೇ ನಂದನವನ

ನೀಲಿ ಬಾನಲಿ, ಮುಂಜಾವಿನಲಿಮೂಡಲ ಮನೆಯ ಬೆಳಗೋರವಿಯ ಹೊಂಗಿರಣದ ನಡುವೆಗರಿಬಿಚ್ಚಿ ಹಾರುತಾ.. ಸಾಗುವಹಕ್ಕಿಯ ರೆಕ್ಕೆಯಂತಾ ಹುಬ್ಬುಗಳು..

ಬೆಳ್ಳಿ ಬಟ್ಟಲೊಳಗಿನ ಶಿವಲಿಂಗದಂತೆಹೊಳೆವ ಆ ನಿನ್ನ ನಯನಗಳೋನಾ ಮೆತ್ತಗೆ ಮುತ್ತಿಟ್ಟು, ಎದೆಗೆ ನಿನ್ನಆವರಿಸಿಕೊಳ್ಳುವ ಬಯಕೆಯನ್ನುಪದೆಪದೇ ಇಮ್ಮಡಿಗೊಳಿಸುತಿದೆ..

ದೃಷ್ಟಿ ಬೊಟ್ಟನಿಟ್ಟ ಆ ನಿನ್ನಮೃದುಲ ಕೆನ್ನೆಯಲಿ, ನೀ ನಗುವಾಗಅರಳಿ ಹಾಗೇ ಮಾಯವಾಗುವಕೆನ್ನೆಗುಳಿಯೊಳು ನಾ ಒಂದಷ್ಟುಮುತ್ತುಗಳ ಸುರಿಸಿ, ಅದ ಬಚ್ಚಿಡಲೇಎಂದು ನನಗೀಗ ಅನಿಸುತಿದೆ..

ನೀ ನಗುವಾಗ ಶ್ರೀಕೃಷ್ಣ,ನೀ ನೋಡುವಾಗ ಶ್ರೀರಾಮನೀ‌ ನಡೆಯಲು ಅಣಿವಾದೊಡೆಕಂಡಂತಾಗುತಿದೆ ಆ ಶ್ರೀಹನುಮಮಕ್ಕಳಲ್ಲಿ ದೇವರು ಇಹನಂತೇಆ ದೇವರೇ ಮಕ್ಕಳಾಗುವರಂತೆ.

ಆ ನಿನ್ನ ಎಳೆಪಾದಗಳಿಗೋ,ನಾ ಕೊಟ್ಟ ಮುತ್ತುಗಳಿಗೆ ಲೆಕ್ಕವಿಲ್ಲ.ನನ್ ಎದೆ ಮೇಲೆ ಕಾಲಿಟ್ಟು ನೀಕುಣಿವಾಗ, ಕಾಣದ ಸ್ವರ್ಗಕೆಕಿಚ್ಚು ಹಚ್ಚಬೇಕೆನಿಸಿದಿರಲ್ಲ‌..ನನ್ನ ಮುದ್ದಿನ ಯಶೋವರ್ಧನನೀನಿದ್ದೋಡೆ ನನಗದೇ ನಂದನವನ..

ಹಂಚಿಕೊಳ್ಳಿShare

ಪ್ರಕಟಣೆ: 20 ಅಕ್ಟೋಬರ್ 2026 · © ರಾಘವೇಂದ್ರ ಪದ್ಮಶಾಲಿPublished: 20 October 2026 · © Raghavendra Padmashali

ಓದುಗರ ಅನಿಸಿಕೆಗಳುReader comments

    ನಿಮ್ಮ ಅನಿಸಿಕೆ ಬರೆಯಿರಿLeave a comment

    ಪ್ರೀತಿLove

    ಮಗೂ.. ಚಿಂತಿಸಬೇಡ ಕಣೋ

    ಮಗೂ... ನೀನೇನೂ ಚಿಂತಿಸಬೇಡ ಕಣೋ ಇಲ್ಲಿ ಎಲ್ಲವೂ ಚೆನ್ನಾಗಿದೆ. ಎಲ್ಲಾ ಅನುಕೂಲವಾಗಿದೆ‌.

    3 ನಿಮಿಷದ ಓದು3 min read8 ಓದುಗರು8 readers

    ಪ್ರೀತಿLove

    ಅಮ್ಮ ಬಿಟ್ಟು ಹೋದ ದಿನ..

    ಜಗದ ಋಣ ತೀರಿತೆಂದು ಅಂದು ಅಮ್ಮ ಬಿಟ್ಟುಹೋದ ದಿನ ಸಾಕೆನಿಸದಷ್ಟು ಹೊತ್ತು ಅತ್ತಿದ್ದೇನೆ, ಬಹಳವಾಗಿ ನೊಂದಿದ್ದೇನೆ,

    3 ನಿಮಿಷದ ಓದು3 min read3 ಓದುಗರು3 readers