ಮುಖ್ಯ ವಿಷಯಕ್ಕೆ ಹೋಗಿSkip to content
ದೈವ ಭಕ್ತಿDevotion

ಕೊನೆಗೂ ಬಂದೆಯಾ... ರಾಮ..!!

Konegoo Bandeya Raama

— Raghavendra Padmashali

2 ನಿಮಿಷದ ಓದು2 min read1 ಓದುಗರು1 reader

ಕೊನೆಗೂ ಬಂದೆಯಾ ರಾಮ,ನೀ ನಿನ್ನದೇ ಅಯೋಧ್ಯೆಗೆ.

ತೇತ್ರಾಯುಗದಲ್ಲಿ ನೀಅದೆಷ್ಟು ನೊಂದಿರುವೆಯೋನನಗಂತೂ ತಿಳಿಯದು.ಕಲಿಯುಗದ ಈ ಆರೇಳುದಶಕಗಳಲ್ಲಿ ನಿನ್ನ ಮನಸುಅದೆಷ್ಟು ಮರುಗಿರಬಹುದು?"ಧರ್ಮೋ ರಕ್ಷತಿ ರಕ್ಷಿತಃ" ಎಂಬಮಾತಿನಂತೆ, ಧರ್ಮವನ್ನುಕಾಪಾಡಾಬೇಕಾದವರೇ ಅದೇಧರ್ಮದ ಹೆಸರಿನಲ್ಲಿ ಕಿತ್ತಾಡಿ,ಶಾಂತಿ-ನೆಮ್ಮದಿ ಹಾಳುಗೆಡವಿದರು.

ನೀನಿದ್ದ ಜಾಗ ನಮ್ಮದೆಂದುಕೋರ್ಟು ಮೆಟ್ಟಿಲು ಏರಿ,ಧರ್ಮದ ಕಿಚ್ಚು ಹೊತ್ತಿಸುತಾ,ರಾಜಕೀಯ ಬೆರೆಸುತಾ,ಅನೇಕ ದಶಕಗಳವರೆಗೂಮಸಿಯ ಬಳಿಯುತ್ತಿದ್ದರು."ತಮ್ಮ ಧರ್ಮವೇ ಶ್ರೇಷ್ಠ"ಎಂಬ ಧರ್ಮಾಂಧಕಾರದಲಿಮೆರೆದ ಅವರೂ ಮನುಷ್ಯರೇ.ಆದರೆ ಮಾನವೀಯತೆ,ಸೋದರ ‌ಬಾಂಧವ್ಯ, ಮಮತೆಎಲ್ಲವನೂ ಮರೆತರು ಅಷ್ಟೇ..

ತಂದೆ ಮಾತು ಕೊಟ್ಟ ತಪ್ಪಿಗೆಮಗನಾಗಿ ನೀ ವನವಾಸಕ್ಕೆಹೊರಟು ನಿಂತಾಗ,ಅಯೋಧ್ಯೆಯ ಜನರೆಲ್ಲಾನಿನ್ನ ಪಾದಕ್ಕೆ ಕಣ್ಣೀರೆರೆದರು.ಇಂದು ಅದೇ ಅಯೋಧ್ಯೆಗೆನೀ ಮರಳಿ ಬರುವೆಯೆಂದುಆನಂದಭಾಷ್ಪವ ಸುರಿಸಿ,ಇಡೀ ಭರತಭೂಮಿಯ ಜನಸಂತಸದಿ ನಲಿಯುತಿಹರು.

ಧರ್ಮಗಳೆರಡರ ನಡುವಿನಜಗಳದಿ ಮುರಿದು ಮುಕ್ಕಾಗಿದ್ದನಿನ್ನ ದೇಗುಲಕ್ಕೆ ಹೊಸ ರೂಪನೀಡಲು ಭೂಮಿಪೂಜೆಯಇಂದು ಮಾಡುತಿಹರೋ ರಾಮ.ಧರ್ಮಗಳ ತಿಕ್ಕಾಟದಲ್ಲಿ,ಕಾನೂನು ಜಟಿಲತೆಯಲ್ಲಿ,ರಾಜಕೀಯ ಕುಟಿಲತೆಯಲ್ಲಿಜೀವನಪರ್ಯಂತ ಹೋರಾಡಿ,ಕೊನೆಗೂ ಗೆದ್ದು, ಸನಾತನಧರ್ಮದ ಗೌರವ ಉಳಿಸಿಹರು.

ಇಡೀ ಅಯೋಧ್ಯಾಪುರಿಯೇದೀಪಾಲಂಕೃತಗೊಂಡು,ಮನೆಮನೆಯಲ್ಲೂ ಹಬ್ಬದವಾತಾವರಣ ಆವರಿಸಿ,ಈ ಭರತನ‌ ದೇಶದ ಜನರಮನಸಿನಲ್ಲಿ‌ ಉತ್ಸಾಹ ತುಂಬಿತೊನೆದು ತೂಗುತ್ತಾ ನಿನ್ನಸ್ವಾಗತಕ್ಕೆ ಬಹುಪರಾಕ್ ಹೇಳಲುತುದಿಗಾಲಲ್ಲಿ ನಿಂತಿಹರೋ‌ ರಾಮ.ತಡಮಾಡದೇ ಬಂದುಬಿಡು ರಾಮ.ರಾಮರಾಜ್ಯದ ಕನಸು ನನಸಾಗಿಸು.

ಹಂಚಿಕೊಳ್ಳಿShare

ಪ್ರಕಟಣೆ: 20 ಅಕ್ಟೋಬರ್ 2026 · © ರಾಘವೇಂದ್ರ ಪದ್ಮಶಾಲಿPublished: 20 October 2026 · © Raghavendra Padmashali

ಓದುಗರ ಅನಿಸಿಕೆಗಳುReader comments

    ನಿಮ್ಮ ಅನಿಸಿಕೆ ಬರೆಯಿರಿLeave a comment

    ಪ್ರೇರಣೆInspiration

    ನಿನ್ನೆದೆಯಲಿ ಧೈರ್ಯವೇ ತುಂಬಲಿ

    ನಿನ್ನೆದೆಯಲಿ ಧೈರ್ಯವೇ ತುಂಬಲಿ.. ಮನದಾ ಅಳುಕು ದೂರವಾಗಲಿ.. ನೀನೊಮ್ಮೆ ಕೇಳು ನನ್ನ ಮಾತನ್ನ. ಪ್ರಯತ್ನಾ ಮಾಡಿಯೂ ಸೋತರೆ ಸಾಲದು,

    1 ನಿಮಿಷದ ಓದು1 min read1 ಓದುಗರು1 reader

    ಪ್ರೀತಿLove

    ಬಚ್ಚಿಡಲೇ

    ಈ ಮುಂಜಾನೆಯಲಿ ರವಿ ಚೆಲ್ಲಿದ ಹೊಂಗಿರಣದಂತೆ, ನನ್ನೆದೆಯಲಿ ಧುಮ್ಮಿಕ್ಕಿ ಹೊಮ್ಮುವ ಹೊಂಬಣ್ಣದಂತಾ ಪ್ರೀತಿಯನು;

    1 ನಿಮಿಷದ ಓದು1 min read1 ಓದುಗರು1 reader

    ಸಮಾಜSociety

    ಭಿಕ್ಷುಕ ನಾನಲ್ಲ

    ಭಿಕ್ಷುಕನು ನಾನಲ್ಲ, ಇವರಂಥಾ ಭಿಕ್ಷುಕನು ನಾನಲ್ಲ..! ಬಡವರ ಹೊಟ್ಟೆಯನು ಬಡಿದು, ದಿನದ ಮಾಮೂಲು

    1 ನಿಮಿಷದ ಓದು1 min read