ಅಮ್ಮನಿಗೆ ಲಾಲಿ ಹಾಡುವೆ..!!
Ammanige Laali Haaduve
— Raghavendra Padmashali
2 ನಿಮಿಷದ ಓದು2 min read1 ಓದುಗರು1 reader

ಇಹಲೋಕವ ತ್ಯಜಿಸಿ,ಭೂಗರ್ಭವ ಸೇರಿನೂರಾರು ದಿನವಾಯ್ತು ಅಮ್ಮಾ..ಕಳೆದು ಹೋದದ್ದನು ಚಿಂತಿಸಿ,ಕೊರಗಿದಿರು ಅಮ್ಮಾ..ಮುಂದೆ ಹೇಗೋ ಏನೋಎಂದು ಮರುಗದಿರು ಅಮ್ಮಾ..ಎಲ್ಲವನೂ ಮರೆತುಬಿಡು,ಸುಖವಾಗಿ ಮಲಗಿಬಿಡುನಿನಗೆ ಜೋ ಲಾಲಿ ನಾ ಹಾಡುವೆ..!ಅಮ್ಮಾ ನಿನಗೆ ನಾ ಲಾಲಿ ಹಾಡುವೆ..!!
ವರುಷಗಳವರೆಗೂ ಕಾಡಿದಖಾಯಿಲೆಯೂ ಈಗ ದೂರ.ಸಂಸಾರದ ನೊಗ ಹೊತ್ತುದಣಿದಿದ್ದ ನಿನಗಿನ್ನು ಇರದು ಭಾರ.ಅಪ್ಪನ ಚಿಂತೆಯ ಮಾಡದಿರು,ಮಗುವಂತೆ ನೋಡಿಕೊಳ್ಳುವೆವು ನಾವು.ಎಲ್ಲವನೂ ಮರೆತುಬಿಡು,ಸುಖವಾಗಿ ಮಲಗಿಬಿಡುನಿನಗೆ ಜೋ ಲಾಲಿ ನಾ ಹಾಡುವೆ..!ಅಮ್ಮಾ ನಿನಗೆ ನಾ ಲಾಲಿ ಹಾಡುವೆ..!!
ಮನೆಗೆ ಬಂದವರ ನೀನುಉಪಚರಿಸಿ, ಸತ್ಕರಿಸುವಾಗಬಂದು ಹೋದ ಬಂಧುಗಳು ಸಾವಿರಾರು.ಖಾಯಿಲೆಯಿಂದಲಿ ನರಳಿ,ದೈಹಿಕವಾಗಿ ಸೋತು, ನೀ ಮುಮ್ಮಲಮರಗುವಾಗ ಬಂದವರು ಯಾರು?ಹೇಳು ನಮ್ಮವರು ಯಾರು..?ಎಲ್ಲವನೂ ಮರೆತುಬಿಡು,ಸುಖವಾಗಿ ಮಲಗಿಬಿಡುನಿನಗೆ ಜೋ ಲಾಲಿ ನಾ ಹಾಡುವೆ..!ಅಮ್ಮಾ ನಿನಗೆ ನಾ ಲಾಲಿ ಹಾಡುವೆ..!!
ದೂರಾದ ಬಂಧುಗಳು,ಬಲುದೂರವೇ ಇರಲಿ,ಸುಖದ ಕನಸು ಕಾಣದಷ್ಟುಕಷ್ಟ-ನಷ್ಟಗಳೇ ಬರಲಿ…!ಯಾವುದಕ್ಕೂ ಹೆದರದೇ,ಎಲ್ಲವನೂ ಎದುರಿಸಲು ಕಲಿಸಿರುವೆ ನೀನುನಿನ್ನ ಆರೈಕೆಯಲಿ ಬೆಳೆದ ಪೈರುಗಳು ನಾವು.ನೀನೆಂದೂ ಚಿಂತಿಸದಿರು ಅಮ್ಮಾ..ಎಲ್ಲವನೂ ಮರೆತುಬಿಡು,ಸುಖವಾಗಿ ಮಲಗಿಬಿಡುನಿನಗೆ ಜೋ ಲಾಲಿ ನಾ ಹಾಡುವೆ..!ಅಮ್ಮಾ ನಿನಗೆ ನಾ ಲಾಲಿ ಹಾಡುವೆ..!!
ಪ್ರಕಟಣೆ: 20 ಅಕ್ಟೋಬರ್ 2026 · © ರಾಘವೇಂದ್ರ ಪದ್ಮಶಾಲಿPublished: 20 October 2026 · © Raghavendra Padmashali


