ಮುಖ್ಯ ವಿಷಯಕ್ಕೆ ಹೋಗಿSkip to content
ಪ್ರೀತಿLove

ನಾ ಹೇಗೆ ಬಣ್ಣಿಸಲಿ

Naa Hege Bannisali

— Raghavendra Padmashali

1 ನಿಮಿಷದ ಓದು1 min read

ನಾ ಏನಂಥಾ ಬರೆಯಲಿ..ನಿತ್ಯ ಚಿಗುರುವ ಹಸಿರಂಥಾಈ ಪ್ರೀತಿಯ ಹೇಗೆ ಬಣ್ಣಿಸಲಿ..

ಬೆಳಗ್ಗೆ ಎದ್ದಾಗಿನಿಂದ..ರಾತ್ರಿ ಮಲಗುವ ತನಕನನ್ನೆಲ್ಲಾ ಬೇಕು-ಬೇಡಗಳಗೊಡವೆಯ ನಡುವೆ.. ನೀಅಮ್ಮನಂತೆ ಲಾಲಿಸುವಪರಿಯಲ್ಲಿ ಅಡಗಿರುವಆ ಪ್ರೀತಿಯ ನಾ ಹೇಗೆ ಬಣ್ಣಿಸಲಿ

ಎದುರಲ್ಲೇ ಕುಂತರೂ..ಮತ್ತೆಲ್ಲೋ ಹಾರಿದ ಮನಸು,ಮತ್ತೆ ಬಂದಿತು, ನಿನ್ನ ತರಲೆ-ಚೇಷ್ಟೆಗೆ ತುಸು ಎಚ್ಚರವಾದಂತೆ..ಸೋದರಿಯಂತೆ ನೀ ಮಾಡುವತರಲೆ ಕಾಟಗಳಲ್ಲಿ ಅಡಗಿರುವಆ ಪ್ರೀತಿಯ ನಾ ಹೇಗೆ ಬಣ್ಣಿಸಲಿ

ಮತ್ತ್ಯಾರೋ ಎದುರಲ್ಲಿ..ಟೊಂಕವ ಬಳುಕಿಸಿ ನಡೆವಸುಂದರಿಯ ವಯ್ಯಾರದಲಿನನ್ ಕಣ್ಣೋಟ ಸಿಲುಕಿರಲು..ನನ್ನನು ಕಣ್ಣಲ್ಲೇ ಸುಟ್ಟುಬಿಡುವನಿನ್ನ ಕೋಪದೊಳ್ ಅಡಗಿರುವಆ ಪ್ರೀತಿಯ ನಾ ಹೇಗೆ ಬಣ್ಣಿಸಲಿ..

ಚಂದಿರನ ಬೆಳದಿಂಗಳಲಿ..ಸವಿರುಚಿಯ ಊಟ ಮುಗಿಸಿ..ಇಂದು-ನಿನ್ನೆಗಳ ನೋವ ಮರೆತುನಾಳೆಗಳ ಸಂಭ್ರಮಕೆ ಹೊಸಕನಸಕಾಣಲು, ಸುಖನಿದಿರೆಗೆ ನಾ ಜಾರಲು..

ನಿನಗೆ ನಿದಿರೆ ಬರುವವರೆಗೂ..ಎದೆಮೇಲೆ ಮಲಗಿದ್ದು, ಕೊಸರಿಮುದುಡಿಕೊಂಡೇ ಮತ್ತೆ ಅಲ್ಲೇಮಲಗಿ ಹೊಸಕನಸು ಕಾಣುವಮುಗ್ಧತೆಯಲಿ ಅಡಗಿರುವಆ ಪ್ರೀತಿಯ ನಾ ಹೇಗೆ ಬಣ್ಣಿಸಲಿ

ಒಲವೇ... ನೀನೆ ಹೇಳು...ಆ ಪ್ರೀತಿಯ ನಾ ಹೇಗೆ ಬಣ್ಣಿಸಲಿ

ಹಂಚಿಕೊಳ್ಳಿShare

ಪ್ರಕಟಣೆ: 20 ಅಕ್ಟೋಬರ್ 2026 · © ರಾಘವೇಂದ್ರ ಪದ್ಮಶಾಲಿPublished: 20 October 2026 · © Raghavendra Padmashali

ಓದುಗರ ಅನಿಸಿಕೆಗಳುReader comments

    ನಿಮ್ಮ ಅನಿಸಿಕೆ ಬರೆಯಿರಿLeave a comment

    ಪ್ರೀತಿLove

    ಮಗೂ.. ಚಿಂತಿಸಬೇಡ ಕಣೋ

    ಮಗೂ... ನೀನೇನೂ ಚಿಂತಿಸಬೇಡ ಕಣೋ ಇಲ್ಲಿ ಎಲ್ಲವೂ ಚೆನ್ನಾಗಿದೆ. ಎಲ್ಲಾ ಅನುಕೂಲವಾಗಿದೆ‌.

    3 ನಿಮಿಷದ ಓದು3 min read8 ಓದುಗರು8 readers

    ಪ್ರೀತಿLove

    ಅಮ್ಮ ಬಿಟ್ಟು ಹೋದ ದಿನ..

    ಜಗದ ಋಣ ತೀರಿತೆಂದು ಅಂದು ಅಮ್ಮ ಬಿಟ್ಟುಹೋದ ದಿನ ಸಾಕೆನಿಸದಷ್ಟು ಹೊತ್ತು ಅತ್ತಿದ್ದೇನೆ, ಬಹಳವಾಗಿ ನೊಂದಿದ್ದೇನೆ,

    3 ನಿಮಿಷದ ಓದು3 min read3 ಓದುಗರು3 readers