ನಿನ್ನೆದೆಯಲಿ ಧೈರ್ಯವೇ ತುಂಬಲಿ
Ninnedeyali Dhairyave Tumbali
— Raghavendra Padmashali
1 ನಿಮಿಷದ ಓದು1 min read2 ಓದುಗರು2 readers

"ಮುಸ್ಸಂಜೆ ಮಾತು" ಚಿತ್ರದ "ಏನಾಗಲಿ ಮುಂದೆ ಸಾಗು ನೀ" ಎಂಬ ಹಾಡಿಗೆ ಕಸ್ತೂರಿ ವಾಹಿನಿಯ "ಹೃದಯ ಗೀತೆ ಬರೆದೆ ನೀನು" ಎಂಬ ಕಾರ್ಯಕ್ರಮದಲ್ಲಿ ನಾನು ಬರೆದ ಹೊಸ ಸಾಹಿತ್ಯ..
ಕವನ ವಾಚನPoem recital
ನಿನ್ನೆದೆಯಲಿ ಧೈರ್ಯವೇ ತುಂಬಲಿ..ಮನದಾ ಅಳುಕು ದೂರವಾಗಲಿ..ನೀನೊಮ್ಮೆ ಕೇಳು ನನ್ನ ಮಾತನ್ನ.
ಪ್ರಯತ್ನಾ ಮಾಡಿಯೂ ಸೋತರೆ ಸಾಲದು,ಮತ್ತೆ ಮತ್ತೆ ಗೆಲ್ಲುವ ಕನಸು ಕಾಣಬೇಕಿಲ್ಲಿ.ಸೋಲಿಗೂ, ಗೆಲುವಿಗೂ ಅಂತರ ಸಣ್ಣದು,ಪಡೆದಂತ ತಾಳ್ಮೆ ದಾರಿದೀಪ, ಸೋಲಿನ ಅನುಭವ.
ನಿನ್ನೆದೆಯಲಿ ಧೈರ್ಯವೇ ತುಂಬಲಿ..ಮನದಾ ಅಳುಕು ದೂರವಾಗಲಿ..ನೀನೊಮ್ಮೆ ಕೇಳು ನನ್ನ ಮಾತನ್ನ.
ಸೋತರೆ ನೋವಿದೆ; ಗೆದ್ದರೆ ನಲಿವಿದೆಸೋತು ಗೆದ್ದರೆ, ಆ ಗೆಲುವು ದೊಡ್ಡದೇ.ನೋವಿನ ದಾರೀಲಿ ಬಳಲಿದ ಜೀವಕೆನಿನ್ನ ಹರಸುವ ಮನಸೇ ದೈವವು.
ಅಮ್ಮನಾ ಕಂಗಳು ಕಂಬನಿ ಸುರಿಸುತ,ತಾಯ ವರವಾಗಿ ಮೌನದಲ್ಲೇ, ನಮ್ಮನು ಹರಸುತ.ಸೋಲನು ಬಯಸದೆ ಮಾಡಿದ ಯತ್ನವು,ಮೊದಲ ಗೆಲುವಿನ ಸಾರ್ಥಕತೆಯ ಸಂತಸ ತರುವುದು.
ನಿನ್ನೆದೆಯಲಿ ಧೈರ್ಯವೇ ತುಂಬಲಿ..ಮನದಾ ಅಳುಕು ದೂರವಾಗಲಿ..ನನ್ನಾಣೆ ಮತ್ತೆ ನೀನು ಸೋಲಲ್ಲ...ನನ್ನಾಣೆ ಮತ್ತೆ ನೀನು ಸೋಲಲ್ಲ...
ಪ್ರಕಟಣೆ: 20 ಅಕ್ಟೋಬರ್ 2026 · © ರಾಘವೇಂದ್ರ ಪದ್ಮಶಾಲಿPublished: 20 October 2026 · © Raghavendra Padmashali


