
ಅಮ್ಮಾ...ನೀ ಲಾಲಿ ಹಾಡಮ್ಮನನಗಾಗಿಜೋ ಲಾಲಿ ಹಾಡಮ್ಮ
ನಾಳೆಯ ಕನಸುಗಳ ಹೊತ್ತು,ನಿನ್ನ ಎದೆ ಮ್ಯಾಲೆ ಮಲಗಿರುವೆ,ನೂರಾರು ದೇವರುಗಳ ಬದಲುನಿನ್ನ ಮಾತ್ರವೇ ಪೂಜಿಸುತಲಿರುವೆ,ಸದಾ ಎದೆಗಪ್ಪಿ ಪ್ರೀತಿಸೋ ನೀನುನನ್ನ ಪಾಲಿನ ಬಂಗಾರದೊಡವೆ.ಭೌತಿಕವೋ, ಅಭೌತಿಕವೋ ಗೊತ್ತಿಲ್ಲಸದಾ ನೀ ಜೊತೆಯಲ್ಲೇ ಇರುವೆ.ಅಮ್ಮಾ ಲಾಲಿ ಹಾಡಮ್ಮ,..ನನಗಾಗಿ ಜೋ ಲಾಲಿ ಹಾಡಮ್ಮ..
ನನ್ನ ಕಣ್ಣೀರ ಒರೆಸುವ ತಾಕತ್ತುನಿನ್ನ ಸೆರಗ ತುದಿಗೆ ಮಾತ್ರ ಇದೆ.ನನ್ನ ಹಸಿವನು ಮರೆಸೋ ಗುಣನಿನ್ನ ಈ ಲಾಲಿಹಾಡಿಗಷ್ಟೇ ಇದೆ.ದೂರ ನೂಕದೇ, ನೋಯಿಸದೇ ಅಪ್ಪಿಮುದ್ದಿಸೋ ಪ್ರೀತಿ ನಿನ್ನಲ್ಲಿ ಮಾತ್ರ ಇದೆ.ನನ್ನವರು ಯಾರಿರಲಿ ಬಿಡಲಿ, ನೀಸದಾ ಜೊತೆಗಿರುವೆಂಬ ನಂಬಿಕೆಯಿದೆ.ಅಮ್ಮಾ ಲಾಲಿ ಹಾಡಮ್ಮ,..ನನಗಾಗಿ ಜೋ ಲಾಲಿ ಹಾಡಮ್ಮ..
ಬಿಸಿ ಉಸಿರನಿತ್ತು ಜೀವ ಕೊಟ್ಟನಿನ್ನ ನಾ ಮರೆತು ಬದುಕುವುದುಂಟೇ ?ಮೊಲೆಯುಣಿಸಿ ಲಾಲಿಸಿ ಪಾಲಿಸಿದ ನಿನಗೆಆ ಸಾವಿರ ದೇವರು ಸಮರುಂಟೇ ?ನಿನ್ನ ಸುಖದ ಕನಸನ್ನು ಮೂಟೆಕಟ್ಟಿದೂರ ಎಸೆದು, ನೀ ನನ್ನಲ್ಲೇ ಖುಷಿಯಕಂಡಿದ್ದು ನಾ ಮರೆಯುವುದುಂಟೇ ?ನನ್ನ ಪಾಲಿಗೆ ನೀನೇ ಬಂಗಾರ, ವಜ್ರಎಂದು ನೀ ಬೀಗುತ್ತಿದ್ದದ್ದು ನೆನಪುಂಟೇ ?ಇದ್ದಕ್ಕಿದ್ದ ಹಾಗೇ ನನ್ನ ಒಂಟಿಯಾಗಿಸಿನೀ ಮರೆಯಾದದ್ದು ಸರಿಯುಂಟೇ ?ಹೇಳು ನೀ ಮರೆಯಾದದ್ದು ಸರಿಯುಂಟೇ?ಅಮ್ಮಾ ದಯಮಾಡಿ ಲಾಲಿ ಹಾಡಮ್ಮ,..ನನಗಾಗಿ ಜೋ ಲಾಲಿ ಹಾಡಮ್ಮ..
ನಿನ್ನ ಮಡಿಲೇ ನನಗೆ ಸ್ವರ್ಗ,ನೀನಿದ್ದ ಜಾಗವೇ ನನಗೆ ದೇಗುಲ,ಎದೆಗಾನಿಸಿ ಬೆನ್ನು ತಟ್ಟುತ್ತಾ ನನ್ನಮಲಗಿಸೋ ನೀನು ನನ್ನ ಪಂಚಪ್ರಾಣ.ಹಿತವ ಬಯಸಿ, ತಲೆಯ ನೇವರಿಸಿಸಮಾಧಾನ ಮಾಡುವ ಕೈಗಳೇ ಶ್ರೀರಕ್ಷೆ.ಸದಾ ನೀನಿರುವೆ ಎಂಬ ನಂಬಿಕೆಯ ಜೊತೆನೀನಾದೆ ನನ್ನ ಆತ್ಮಬಲ, ಬದುಕೋ ಛಲ.ಈ ಕಾಡುವ ಹಸಿವೆಯ ಮರೆಸಿಬಿಡು,ಸುಖದ ನಿದಿರೆಯ ತರಿಸಿ ಬಿಡುಅಮ್ಮಾ ಲಾಲಿ ಹಾಡಮ್ಮ,..ನನಗಾಗಿ ಜೋ ಲಾಲಿ ಹಾಡಮ್ಮ..ನಿನ್ನ ಮಡಿಲಲ್ಲಿ ಹೀಗೆ ನಾ ಮಲಗಬೇಕಮ್ಮನೀ ಚಂದದ ಜೋ ಲಾಲಿ ಹಾಡಮ್ಮ....
ಪ್ರಕಟಣೆ: 17 ಏಪ್ರಿಲ್ 2022 · © ರಾಘವೇಂದ್ರ ಪದ್ಮಶಾಲಿ


