
ಮಗೂ... ನೀನೇನೂಚಿಂತಿಸಬೇಡ ಕಣೋಇಲ್ಲಿ ಎಲ್ಲವೂ ಚೆನ್ನಾಗಿದೆ.ಎಲ್ಲಾ ಅನುಕೂಲವಾಗಿದೆ.ಹೆಂಡತಿಯ ಮಾತು ಕೇಳಿ ಈವೃದ್ದಾಶ್ರಮಕೆ ನೀ ಬಿಟ್ಟುಹೋದೆಎಂಬ ಕೋಪ ನಮಗಿಲ್ಲ ಕಣೋ.ನಮ್ಮೊಂದಿಗೆ ನಿನಗೆ ಮಾತನಾಡಲುಸಮಯವಿಲ್ಲದಿದ್ದರೂ, ನಮ್ಮ ಬಗ್ಗೆಕಾಳಜಿ ಇದೆಯಲ್ಲ ಅಷ್ಟೇ ಸಾಕು ಕಣೋ.
ನೀನು ನಮ್ಮನು ಈ ಆಶ್ರಮಕೆಸೇರಿಸಿದೆ ಎಂಬುದನು ತಿಳಿದ ದಿನಮಗಳು ದಿನಪೂರ್ತಿ ಫೋನಿನಲ್ಲಿತುಂಬಾ ಅತ್ತು ನೊಂದುಕೊಂಡಳು.ಆದರೆ ಅದೇ ನನ್ನ ಪ್ರೀತಿಯ ಮಗಳು,ಅವಳ ಅತ್ತೆ-ಮಾವಂದಿರನ್ನು ವರುಷಗಳಹಿಂದೆಯೇ ಇಲ್ಲಿಗೆ ಸೇರಿಸಿದ್ದಾಳಂತೆ..!!ಹೆಣ್ಣಿಗೆ ತನ್ನ ತಂದೆ-ತಾಯಿ ಮಾತ್ರ ಮುಖ್ಯ,ಅತ್ತೆ-ಮಾವ ಮುಖ್ಯವಲ್ಲ ಎಂಬ ತರ್ಕಹೆಣ್ಣಾದ ನನಗೇನೆ ಒಪ್ಪಲು ಆಗುತ್ತಿಲ್ಲ.ಯಾವ ಮಹಾಕಾರಣಕ್ಕಾಗಿ ಹೀಗೆ ಈಮನಸ್ಥಿತಿ ಬದಲಾಗುತ್ತಿದೆಯೋ ತಿಳಿಯುತ್ತಿಲ್ಲ.
ತುಂಬಾ ವಯಸ್ಸಾದ ನಿನ್ನ ಅಪ್ಪ,ಒಮ್ಮೆ ಹಾಸಿಗೆಯಲ್ಲಿಯೇ ಮೂತ್ರಮಾಡಿಕೊಂಡರೆಂದು ನೀ ಮುಖಸಿಂಡರಿಸಿಕೊಂಡು ಅವರ ಬೈದುಬಿಟ್ಟೆ.ಆದರೆ ಅದೇ ನಿನ್ನ ಅಪ್ಪನ ಮೇಲೆ,ನೀ ಚಿಕ್ಕವನಿದ್ದಾಗ ಅದೆಷ್ಟು ಬಾರಿ ನೀಮಲ-ಮೂತ್ರ ಮಾಡಿದ್ದೆ ಎಂಬುದನ್ನುಮಾತ್ರ ಕೋಪದಲಿ ನೀ ಮರೆತುಬಿಟ್ಟೆ.ಆಗ ನಿನ್ನಪ್ಪ ಕೋಪಿಸಿಕೊಳ್ಳಲಿಲ್ಲ ಕಣೋ.ನೀ ಕೋಪದಿ ಉರಿದು ನಿಂದಿಸುವಾಗನಿನಗೆರಡು ಬಾರಿಸಿ ಬುದ್ದಿ ಹೇಳಲುಸಾಧ್ಯವಾಗುತ್ತಿಲ್ಲ ಎಂಬ ನೋವಿದೆ ಕಣೋ.ಇರಲಿ ಬಿಡು ನಾವೆಲ್ಲರೂ ಆ ದೇವರುಆಡಿಸುವ ನಾಟಕದ ಪಾತ್ರಧಾರಿಗಳು.
ಮಗೂ, ಇಲ್ಲೇನೋ ತುಂಬಾ ಅನುಕೂಲವಿದೆ,ನೋಡುತ್ತಾ ಕೂರಲು ಒಂದು ಟಿ.ವಿ.ಎಲ್ಲವನ್ನೂ ಮರೆತು ಹರಟುತ್ತಾ ಕೂರಲುಜೊತೆ ಸೇರುವರು ನಮ್ಮಂತೆ ನೊಂದ ಜೀವಿ.ಏನೇನೋ ನೆಪದಿ ಯಾರು ಯಾರೋ ಬರುತ್ತಾರೆ,ಹಣ್ಣು-ತಿಂಡಿ ಕೊಟ್ಟು ಆಶೀರ್ವಾದ ಪಡೆಯುತ್ತಾರೆ.ಆದರೆ ವರುಷಗಳು ಕಳೆದರೂ ನಿಮ್ಮ ಪತ್ತೆಯಿಲ್ಲ.ಇಷ್ಟು ಬೇಗ ಹೇಗೆ ಮರೆತಿರೋ ಗೊತ್ತಾಗುತ್ತಿಲ್ಲ.
ಮಗೂ... ವಯಸ್ಸಾದ ಅಪ್ಪ-ಅಮ್ಮನಿಗೆ ಇಂಥಯಾವ ಅನುಕೂಲಗಳೂ ಬೇಕಾಗುವುದಿಲ್ಲ.ಮಕ್ಕಳು ತಮ್ಮ ಹತ್ತಿರದಲ್ಲೇ ಇದ್ದು, ನಮ್ಮಮನದ ಮಾತುಗಳನ್ನು ಕೇಳಿಸಿಕೊಂಡರೇ ಸಾಕು.ಮಾತು ನಡೆಸಿಕೊಡಬೇಕೆಂಬ ಇರಾದೆಯೂ ಇರಲ್ಲ.ನಿಮ್ಮೊಂದಿಗೆ ಕಾಲ ಕಳೆಯಬೇಕೆಂಬ ಆಸೆಗಳಿಗೆಕಿಂಚಿತ್ತಾದರೂ ಬೆಲೆಯ ಕೊಡುವಿರೋ ಕಾಣೇ.ದೇಹಕ್ಕೆ ಮುಪ್ಪಾಗಿರಬಹುದು ಕಣೋ ಹುಡುಗಾ,ಮಕ್ಕಳ ಮೇಲಿನ ಪ್ರೀತಿಗಿನ್ನೂ ಮುಪ್ಪಾಗಿಲ್ಲ.
ಎಲ್ಲಾ ಕಷ್ಟಗಳ ನಡುವೆ ಬದುಕು ಬಂಡಿಯ ಸಾಗಿಸಿ,ವಯೋ ಸಹಜವಾಗಿ ನಿತ್ರಾಣಗೊಂಡ ನಮಗೆಮಕ್ಕಳ ಮೇಲಿನ ಅಭಿಮಾನಕೆ ಆನಂದದ ಕಣ್ಣೀರುಬರಬೇಕೆ ಹೊರತು, ದುಃಖದ-ನೋವಿನ ಕಣ್ಣೀರಲ್ಲ.ಅದೇನೆ ಇರಲಿ ಬಿಡು, ನಿನ್ನ ಮುಪ್ಪಿನ ಕಾಲಕ್ಕೆನಿನ್ನ ಮಕ್ಕಳಿಂದ ದೂರ ಇರಬೇಕಾದ ಕಾಲವಂತೂನಿನ್ನ ಕನಸಲ್ಲೂ ಬಾರದಿರಲಿ ಮಗನೇ ನಿನಗೆ..ಸದಾ ಮಕ್ಕಳೊಂದಿಗೆ ಸುಖವಾಗಿ ಬಾಳು ಕಂದಾ.ಯಾವಗಲೂ ನಮ್ಮ ಆಶೀರ್ವಾದ ಇದೆ ನಿಮಗೆ.
ಪ್ರಕಟಣೆ: 24 ಜೂನ್ 2021 · © ರಾಘವೇಂದ್ರ ಪದ್ಮಶಾಲಿ


