
ಹೇಳುವೆಯಾ ಗೆಳತಿ..ನನ್ನ ಮೇಲಿನ ಕೋಪವದುಇನ್ನೂ ಕರಗಲಿಲ್ಲ ಯಾಕೆ..?ಯಾವುದೋ ಕ್ಷಣದಲ್ಲಿ,ಮತ್ತ್ಯಾವುದೋ ಕಾರಣಕೆನೀ ಮಾಡಿಕೊಂಡ ಕೋಪ,ಇನ್ನೂ ಆರಲಿಲ್ಲವೇಕೆ?ನನ್ನದೇನೂ ತಪ್ಪಿಲ್ಲವೆಂದುನಿನಗೂ ಸಹ ಗೊತ್ತಿದ್ದರೂನೋಡಿ ನಸುನಗುತ್ತಿಲ್ಲವೇಕೆ?ನಿನಗೂ ಬೇಡದ ಈ ಮುನಿಸುನೀ ಮರೆಮಾಚುತ್ತಿಲ್ಲವೇಕೇ?
ಒಂದಲ್ಲ ಎರಡಲ್ಲ ಕಣೆ, ಹಲವುದಶಕಗಳೇ ಕಳೆದುಹೋದವು.ಆದರೂ ನಿನ್ನ ನೆನಪು ಮಾತ್ರಇನ್ನು ಹಸಿರಾಗಿಯೇ ಇದೆ ಕಣೇ.ಪ್ರೀತಿಯ ಗೆಳತಿಯೇ,ನಮ್ಮಿಬ್ಬರ ಒಡನಾಟದ ಸ್ನೇಹಕೆ,ನನ್ನಲ್ಲಿ ಇರೋ ಇದೇ ತುಡಿತ,ಇದೇ ಸ್ನೇಹ, ಇದೇ ಪ್ರೀತಿನಿನ್ನಲ್ಲೂ ಇದೆ ಎಂಬ ಸತ್ಯನನಗೂ ಗೊತ್ತು ಬಿಡು ಚೆಲುವೆ.ನೀ ಮಾತನಾಡದೇ ಹೀಗೇ,ಮೌನ ತಾಳಲು, ನನಗೇನುಅದು ಅರ್ಥವಾಗದ ಭಾವವೇ?
ಇನ್ನೂ ಸಾವಿರಾರು ದಿನಗಳುನೀ ಮಾತನಾಡದೇ ಇದ್ದರೂ,ಕಣ್ಣಿಗೆ ಕಾಣದೇ ಇದ್ದರೂ, ನಿನ್ನನಾ ಎಂದೂ ಮರೆಯುವುದಿಲ್ಲ.ಹಾಗೇ ನೀನೂ ಕೂಡ ನನ್ನಮರೆಯುವುದೇ ಇಲ್ಲ ಬಿಡು ಗೆಳತಿ.ಕದಡಿದ ಮನಸು ತಿಳಿಯಾಗಿ,ಸಮಯವದು ಮತ್ತೆ ಹೊಸದಾಗಿಇಬ್ಬರ ಮನಸಿನ ನೋವು-ನಲಿವುಹಂಚಿಕೊಳ್ಳುವ ದಿನಗಳು ಮತ್ತೇಚಿಗುರೊಡೆದು ಬರಲಿ ಗೆಳತಿ.ನಗುನಗುತಾ ನೀ ಪಟಪಟನೆಮಾತನಾಡುವುದನ್ನೇ ನಾನೋಡುವ ಕ್ಷಣಗಳು ಮತ್ತೆ ಬರಲಿ.
ಪ್ರಕಟಣೆ: 16 ಜುಲೈ 2021 · © ರಾಘವೇಂದ್ರ ಪದ್ಮಶಾಲಿ


