ಮುಖ್ಯ ವಿಷಯಕ್ಕೆ ಹೋಗಿ
ರಾಘವೇಂದ್ರ ಪದ್ಮಶಾಲಿRaghavendra Padmashali
ಪ್ರೀತಿ

ನೀ‌ ನನಗಷ್ಟೇ ಸ್ವಂತ ಕಣೋ..

Nee Nanagashte Swanta Kano

— Raghavendra Padmashali

2 ನಿಮಿಷದ ಓದು

ಹೇ ಹುಡುಗಾ....ನೀ ನನ್ನ ಹೊರತು,ಮತ್ತ್ಯಾವ ಹೆಣ್ಣ ಕಣ್ಣಬೆರೆಸಿಮಾತನಾಡಬೇಡ ಕಣೋ.ನೀ‌ ನನ್ನ ಹೊರತು,ಇನ್ಯಾವ ಹುಡುಗಿ ಜೊತೆಸಲುಗೆಯಿಂದಿರಬೇಡ ಕಣೋ.

ಅದೇನೋ ಗೊತ್ತಿಲ್ಲ,ಅದ್ಯಾಕೆಂದೂ ಗೊತ್ತಿಲ್ಲ,ಬೇರೆ ಹೆಣ್ಣಿನ ಜೊತೆ ನೀಮಾತನಾಡುವುದು ನನಗೆಸಹಿಸಲಾಗುವುದಿಲ್ಲ ಕಣೋ.ಪ್ರೀತಿಯ ಪರಮಾವಧಿಯೋ,ಪ್ರೇಮದಾ ಮತ್ಸರವೋ ಕಾಣೇ,ಎಂದಿಗೂ ಎಂದೆಂದಿಗೂ ನೀನನ್ನನ್ನೇ ಸುತ್ತುತ್ತಿರಬೇಕು ಕಣೋ.

ನೀ ನನಗಷ್ಟೇ ಸ್ವಂತ ಕಣೋ,ನೀ ನನಗಷ್ಟೇ ಸೀಮಿತ ಕಣೋ‌,ನೀ‌ ನೋಡುವುದಾದರೇ ಎಲ್ಲರನಡುವೆ ನನ್ನನ್ನು ಮಾತ್ರ ನೋಡು.ಅಂದವ ನೀ ಬಣ್ಣಿಸುವುದಾದರೇನನ್ನ ಈ ಚೆಲುವಿನ ಕುರಿತೇ ಹಾಡು.ಕವಿತೆಯ ನೆಪದಲಿ ನೀ ಬರೆವ ನೂರುಸಾಲೂ ನನ್ನನ್ನೇ ಹೊಗಳಬೇಕು ನೋಡು.ಒಂದಂತೂ ತಿಳಿದಿಕೋ ಹುಡುಗಾ,ನೀ ನನಗಷ್ಟೇ ಸ್ವಂತ ಕಣೋ,ನೀ ನನಗಷ್ಟೇ ಸೀಮಿತ ಕಣೋ.

ನಿನ್ನೊಲವಿನ ಸುಳಿಗೆ ಸಿಕ್ಕಾಗಿನಿಂದ,ನಿನ್ನದೇ ಜಪ ತಪ ಕಣೋ ಹುಡುಗಾ‌.ಈ ತುಟಿಗಳೆರಡು ಬೆರೆಸಿ ನೀ ಕೊಡುವಾಗ,ಸವಿದಷ್ಟು ಸವಿಯಬೇಕೆನಿಸುತಿದೆ ನನಗ.ಎಲ್ಲಾ ಮರೆಸಿ, ಮತ್ತೇರಿಸಿದ ಪ್ರೀತಿ ನಿನ್ನದು,ಕೊನೆವರೆಗೂ ಒಂದಾಗಿರುವ ಹೊಣೆ ನನ್ನದು.ನಾ ಮತ್ತೆ ಮತ್ತೆ ಹೇಳಲಾರೆ ಕಣೋ..,ನೀ ಯಾವ ಹೆಣ್ಣ ಕಣ್ಣ ಬೆರೆಸಿ ನೋಡಬ್ಯಾಡ,ಸಲುಗೆಯಿಂದ ಮಾತನಾಡಬೇಡ ಕಣೋ.ನಿನ್ನ ಪ್ರೀತಿಸಿದ ಹಕ್ಕಿನಲ್ಲಿನಾ ಮತ್ತೆ ಮತ್ತೆ ಹೇಳುತಲಿರುವೆ..ನೀ ನನಗಷ್ಟೇ ಸ್ವಂತ ಕಣೋ,ನೀ ನನಗಷ್ಟೇ ಸೀಮಿತ ಕಣೋ

ಹಂಚಿಕೊಳ್ಳಿ

ಪ್ರಕಟಣೆ: 23 ಜೂನ್ 2021 · © ರಾಘವೇಂದ್ರ ಪದ್ಮಶಾಲಿ

ಓದುಗರ ಅನಿಸಿಕೆಗಳು

    ನಿಮ್ಮ ಅನಿಸಿಕೆ ಬರೆಯಿರಿ

    ಪ್ರೀತಿ

    ಅಮ್ಮ ಬಿಟ್ಟು ಹೋದ ದಿನ..

    ಜಗದ ಋಣ ತೀರಿತೆಂದು ಅಂದು ಅಮ್ಮ ಬಿಟ್ಟುಹೋದ ದಿನ ಸಾಕೆನಿಸದಷ್ಟು ಹೊತ್ತು ಅತ್ತಿದ್ದೇನೆ, ಬಹಳವಾಗಿ ನೊಂದಿದ್ದೇನೆ,

    3 ನಿಮಿಷದ ಓದು1 ಓದುಗರು

    ಪ್ರೀತಿ

    ಹೇಳುವೆಯಾ ಗೆಳತಿ..?

    ಹೇಳುವೆಯಾ ಗೆಳತಿ.. ನನ್ನ ಮೇಲಿನ ಕೋಪವದು ಇನ್ನೂ ಕರಗಲಿಲ್ಲ ಯಾಕೆ..? ಯಾವುದೋ ಕ್ಷಣದಲ್ಲಿ,

    1 ನಿಮಿಷದ ಓದು1 ಓದುಗರು