ಮುಖ್ಯ ವಿಷಯಕ್ಕೆ ಹೋಗಿSkip to content
ಭಾವನೆಗಳುEmotions

ಅಮ್ಮಾ... ನೀ ಇಲ್ಲದೇ

Amma nee illade..

— Raghavendra Padmashali

1 ನಿಮಿಷದ ಓದು1 min read15 ಓದುಗರು15 readers

ಅಮ್ಮಾ ನೀ ಇಲ್ಲದೇಹಲವು ಹಗಲುಗಳು ಕಳೆದಿವೆ,ಹಲವು ಇರುಳುಗಳು ಉರುಳಿವೆ,ಆರೇಳು ವರುಷಗಳೂ ಸರಿದಿವೆ,ನಿಲ್ಲದೇ ಓಡುವ ಈ ಕಾಲದ ನಡುವೆಎಂದೂ ಮಾಸದ ನಿನ್ನ ನೆನಪುಗಳಿವೆ.

ನೀ ಇಲ್ಲದ ಮನೆಯಲ್ಲೂ ಹಬ್ಬಗಳಿತ್ತು,ಸಡಗರ-ಸಂಭ್ರಮಗಳು ನಡೆಯುತ್ತಿತ್ತು.ಮನೆಯಲಿ ಮಕ್ಕಳ ಕಲರವ ಕಳೆಗಟ್ಟುತ್ತಿತ್ತು.ಈ ಎಲ್ಲದರ ನಡುವೆ ಇರುವುದೆಲ್ಲವ ಬಿಟ್ಟು ನನ್ನ ಮನಸು ಎಲ್ಲೆಡೆ ನಿನ್ನ ಹುಡುಕುತ್ತಿತ್ತು.ಅಮ್ಮಾ.. ಈ ಮನಸು ನಿನ್ನನೇ ಹುಡುಕುತ್ತಿತ್ತು.

ಅಮ್ಮಾ ಇಲ್ಲಿ ನೀನಿಲ್ಲದ ಮನೆಯಿದೆ,ಮತ್ತೆ ಮತ್ತೆ ನೀ ಕಾಣ ಸಿಗದ ಊರಿದೆ,ನಿನ್ನ ನೋಡಲಾಗದ ಜಗತ್ತೇ ಇದಾಗಿದೆ.ಸುತ್ತಮುತ್ತಲೂ ಇಲ್ಲಿ ಯಾರಿದ್ದರೇನು,ನನಗಂತೂ ನಿನ್ನಂತೇ ಪ್ರೀತ್ಸೋರ ಕೊರತೆ ಇದೆ,ಅಮ್ಮಾ... ನಿನ್ನ ಪ್ರೀತಿಯ ಕೊರತೆಯಾಗಿದೆ.

ಅಮ್ಮಾ ‌‌‌... ನಿನ್ನ ಪ್ರೀತಿ ಬೇಕಾಗಿದೆ,ಬೆಚ್ಚನೆ ಆ ನಿನ್ನ ಅಪ್ಪುಗೆ ಬೇಕಾಗಿದೆ.ಒಲವಿದು, ಅಬ್ಬಾ ಎಂದೂ ಕರಗದು,ನೀ ಜೊತೆಗಿರಲು ಸಾವಿರ ಜನುಮಗಳೂ ಸಾಲದು

ಹಂಚಿಕೊಳ್ಳಿShare

ಪ್ರಕಟಣೆ: 28 ಅಕ್ಟೋಬರ್ 2026 · © ರಾಘವೇಂದ್ರ ಪದ್ಮಶಾಲಿPublished: 28 October 2026 · © Raghavendra Padmashali

ಓದುಗರ ಅನಿಸಿಕೆಗಳುReader comments

    ನಿಮ್ಮ ಅನಿಸಿಕೆ ಬರೆಯಿರಿLeave a comment

    ಜೀವನLife

    ಅಪ್ಪ ಕೊಡಿಸಿದ ಸೈಕಲ್ಲು

    ಸೀಟಲಿ ಕುಳಿತು, ಪೆಡಲ್ಲು ತುಳಿಯುತಾ ಟ್ರಿಣ್‌ ಟ್ರಿಣ್‌ ಬೆಲ್ಲು ಸದ್ದನು ಮಾಡುತಾ ಸೊಯ್ಯನೇ ಹೊರಟೆ ಸೈಕಲ್ಲು ಏರುತಾ ಅಪ್ಪ ಕೊಡಿಸಿದ ಸೈಕಲ್ಲು ತುಳಿಯುತಾ

    1 ನಿಮಿಷದ ಓದು1 min read30 ಓದುಗರು30 readers

    ಪ್ರೀತಿLove

    ಅಮ್ಮ ಬಿಟ್ಟು ಹೋದ ದಿನ..

    ಜಗದ ಋಣ ತೀರಿತೆಂದು ಅಂದು ಅಮ್ಮ ಬಿಟ್ಟುಹೋದ ದಿನ ಸಾಕೆನಿಸದಷ್ಟು ಹೊತ್ತು ಅತ್ತಿದ್ದೇನೆ, ಬಹಳವಾಗಿ ನೊಂದಿದ್ದೇನೆ,

    3 ನಿಮಿಷದ ಓದು3 min read3 ಓದುಗರು3 readers