
ಈ ಮುಂಜಾನೆಯಲಿ ರವಿಚೆಲ್ಲಿದ ಹೊಂಗಿರಣದಂತೆ,ನನ್ನೆದೆಯಲಿ ಧುಮ್ಮಿಕ್ಕಿ ಹೊಮ್ಮುವಹೊಂಬಣ್ಣದಂತಾ ಪ್ರೀತಿಯನು;ನಿನ್ನ ತಿಳಿಗೆಂಪು ಕೆನ್ನೆಗೆಪದೆಪದೇ ತಾಕಿ ಮುತ್ತಿಡುವಮುಂಗುರುಳ ಸರಿಸುವ ನನ್ನತೋರುಬೆರಳ ತುದಿಯಲಿಅಡಗಿರುವ ಹುಚ್ಚುಪ್ರೀತಿಯನು;
ಆಗಾಗ ಕೇಳಿಬರುವಕೋಗಿಲೆಯ ಚೈತ್ರದ ಹಾಡಿಗೆಜತೆಯಾಗಿರುವ ಕೈಬಳೆಯ ಸದ್ದಿನಲ್ಲೊ,ಇಲ್ಲವೇ ಕಾಲ್ಗೆಜ್ಜೆಯ ದನಿಯಲ್ಲೋಅಡಗಿರುವ ನನ್ನ ಹಸಿಪ್ರೀತಿಯನು;ಎಲ್ಲವನೂ ಒಟ್ಟಾಗಿಸಿ, ನಾನಿನ್ನ ಹೃದಯದಲಿ ಬಚ್ಚಿಡಲೇ..?
ಇಲ್ಲವೇ, ಕಾಡಿಗೆಯ ತೀಡಿದನಿನ್ನ ಕಣ್ಣಂಚಿನ ಹೊಳಪಿನಲ್ಲೊ,ಈ ರಸಿಕನ ಸರಸಕೆ ಸೋತು,ನಾಚಿ ಅರಳುವ ತುಂಟನಗೆಯಲ್ಲೊ,ಒಮ್ಮೊಮ್ಮೆ ಬಿಡದೆ ಕಾಡುವನಿನ್ನ ಹುಸಿಮುನಿಸಿನಲ್ಲೋಕ್ಷಣಮಾತ್ರಕೆ ಸೋತು, ನಿನ್ನದಾಸನಾಗಿಸಿಹ ನಿನ್ನ ಅಂದದಲ್ಲೋ,ಹೂಮುತ್ತನು ಜೊತೆಗೂಡಿಸಿ,ಈ ಪ್ರೀತಿಯ ನಿನ್ನಲ್ಲೇ ಬಚ್ಚಿಡಲೇ..??
ತಡ ಮಾಡದೇ ಹೇಳಿಬಿಡು ಗೆಳತಿಮುತ್ತುಗಳ ಬೊಗಸೆಯಲಿ ಹಿಡಿದು,ಗುಲಾಬಿ ಹೂದಳದೊಂದಿಗೆ ಸುರಿಸುತಾನಿತ್ಯ ಅಭಿಷೇಕ ಮಾಡಿಬಿಡಲೇ..??
ಪ್ರಕಟಣೆ: 20 ಅಕ್ಟೋಬರ್ 2026 · © ರಾಘವೇಂದ್ರ ಪದ್ಮಶಾಲಿPublished: 20 October 2026 · © Raghavendra Padmashali


