ಮುಖ್ಯ ವಿಷಯಕ್ಕೆ ಹೋಗಿ
ರಾಘವೇಂದ್ರ ಪದ್ಮಶಾಲಿRaghavendra Padmashali
ಪ್ರೀತಿ

ಅಪ್ಪಾ... ನೀನೆಂದರೇ..

Appa Neenendare..

— Raghavendra Padmashali

1 ನಿಮಿಷದ ಓದು

ಅಪ್ಪಾ... ನೀನೆಂದರೇ ನನ್ನಸಪ್ತಸಾಗರದಷ್ಟು ಪ್ರೀತಿಸುವ,ಹೆಗಲಮೇಲೆ ಹೊತ್ತು ಮೆರೆಸುವ,ತಾಯಿಹಕ್ಕಿಯಂತೆ ಕಾಯುವ,ಮಾಡಿದ ತಪ್ಪೆಲ್ಲವನೂ ತಿದ್ದುವ,ಕೈಹಿಡಿದು ಸರಿದಾರಿಯಲಿ ನಡೆಸುವ,ಸದಾ ಬೆನ್ನುತಟ್ಟಿ ಪ್ರೋತ್ಸಾಹಿಸುವ,ಈ ಬಾನೆತ್ತರದ ವ್ಯಕ್ತಿತ್ವದ ಜೀವ;ಕಣ್ಮುಂದೆಯೇ ನಡೆದಾಡುವ ದೈವ.

ನಾ ಹರೆಯಕೆ ಕಾಲಿಟ್ಟ ಹೊಸತರಲ್ಲಿ,ನೀನೇನು ಮಹಾ ಎಂದುಕೊಂಡಿದ್ದೆ.ಎಲ್ಲವನ್ನೂ ಮೆಟ್ಟಿ ನಿಲ್ಲಬಲ್ಲೇ ಎಂಬಅಹಮ್ಮಿನಲ್ಲಿದ್ದ ನನಗೆ ಬಂದೆರಗಿದಕಷ್ಟ-ನಷ್ಟಗಳಿಗೆ ನಾ ಸಣ್ಣಗೆ ಬೆಚ್ಚಿಬಿದ್ದಿದ್ದೆ.ಆಗ ಯಾವುದು ಸರಿ, ಯಾವುದು ತಪ್ಪುಎಂಬ ಪಾಠವ ನೀ ಸೂಕ್ಷ್ಮವಾಗಿ ತಿಳಿಸಿದೆ.ನಿನ್ನ ಆ ತಾಳ್ಮೆ, ಸೂಕ್ಷ್ಮತೆಗೆ ನಾ ಶರಣಾದೆ.

ನನ್ನ ಯಾವುದೋ ಜನ್ಮದ ಪುಣ್ಯದಂತೆಈ ಜನುಮ ಕೊಟ್ಟ ತಂದೆಯೂ ನೀನೆ.ನಾ ನಂಬಿದವರೆಲ್ಲಾ ದೂರ ಸರಿದರೂ,ನನ್ನ ಜೊತೆ ನಿಂತ ಗೆಳೆಯನೂ ನೀನೆ.ಅಪ್ಪಾ... ನಿನ್ನ ಕುರಿತು ಹೀಗೆ ನಾನುಅದೆಷ್ಟು ಬರೆದರೂ, ಈ ಕವಿತೆ ಮುಗಿಯಲ್ಲ‌.ಪಂಚಭೂತಗಳಲಿ ಆಣೆ ಮಾಡಿ ಹೇಳುವೆ,ನಿನಗಿಂತ ದೇವರು, ನನಗಂತೂ ಬೇಕಿಲ್ಲ.

ಹಂಚಿಕೊಳ್ಳಿ

ಪ್ರಕಟಣೆ: 20 ಜೂನ್ 2021 · © ರಾಘವೇಂದ್ರ ಪದ್ಮಶಾಲಿ

ಓದುಗರ ಅನಿಸಿಕೆಗಳು

    ನಿಮ್ಮ ಅನಿಸಿಕೆ ಬರೆಯಿರಿ

    ಪ್ರೀತಿ

    ಅಮ್ಮ ಬಿಟ್ಟು ಹೋದ ದಿನ..

    ಜಗದ ಋಣ ತೀರಿತೆಂದು ಅಂದು ಅಮ್ಮ ಬಿಟ್ಟುಹೋದ ದಿನ ಸಾಕೆನಿಸದಷ್ಟು ಹೊತ್ತು ಅತ್ತಿದ್ದೇನೆ, ಬಹಳವಾಗಿ ನೊಂದಿದ್ದೇನೆ,

    3 ನಿಮಿಷದ ಓದು1 ಓದುಗರು

    ಪ್ರೀತಿ

    ಹೇಳುವೆಯಾ ಗೆಳತಿ..?

    ಹೇಳುವೆಯಾ ಗೆಳತಿ.. ನನ್ನ ಮೇಲಿನ ಕೋಪವದು ಇನ್ನೂ ಕರಗಲಿಲ್ಲ ಯಾಕೆ..? ಯಾವುದೋ ಕ್ಷಣದಲ್ಲಿ,

    1 ನಿಮಿಷದ ಓದು1 ಓದುಗರು