ಒಲವಿನ ಶ್ರೀಮತಿ... ಬಂಗಾರದೊಲುಮೆ..
ನಾ ಅದು ಹೇಗೆ ಆರಂಭಿಸಲಿ, ಏನೆಂದು ಹೇಳಲಿ... ನಿನ್ನ ನನ್ನ ಅನುಬಂಧಕೆ ವರುಷಗರೆಡು ಉರುಳಿತು, ಕನಸೊಂದು ಚಿಗುರೊಡೆಯಿತು. ನನ್ನ ಅನುರಾಗದಲಿ ನಿನ್ನ ನೆನ್ನೆಗಳನು ಮರೆತು, ಎಲ್ಲವನೂ ತೊರೆದು, ನೀ ಕರಗಿಹೋಗಿದಂತೂ ಸುಳ್ಳಲ್ಲ ಬಿಡು. ಅಳುವಿರಲಿ, ನಗುವಿರಲಿ, ಖುಷಿಯಿರಲಿ, ಬೇಸರವಿರಲಿ ನನ್ನೊಡನೆ ಇರಬೇಕೆಂದು ನೀ ಹಠ ಮಾಡುವಾಗ ನಾ ಒಳಗೊಳಗೆ ಬೀಗುತ್ತೇನೆ, ಖುಷಿಯಿಂದ ಉಬ್ಬುತ್ತೇನೆ ಹೆಂಡ್ತಿ.. ನಾ ಗೆದ್ದೆ ಎಂದು, ನನ್ನ ಪ್ರೀತಿ ಗೆದ್ದಿದೆ ಎಂದು.. ಈಗಲೂ ನೂರೆಂಟೂ ಹುಡುಗೀರಿಗೆ ನನ್ನ ಮೇಲೆ ಕಣ್ಣು, ಕಾರಣ ನೀನೆ... ನಿನ್ನ ಮೇಲಿನ ಈ ಪ್ರೀತೀನೇ ಕಾರಣ. ನಾ ಮದುವೆಯಾದ ಮೇಲೆ ನನ್ನ ಪಟ್ಟದರಸಿಯನ್ನು ಹೇಗೆಲ್ಲಾ ನೋಡಿಕೊಳ್ಳಬೇಕೆಂಬ ಕನಸಿನ ಕೆಲ ದೃಶ್ಯಗಳಿಗೆ ಮನಸೋತಿದ್ದಾರೆ, ನಿನ್ನ ಮೇಲೆ ಮತ್ಸರ ಮಾಡಿರಲೂಬಹುದು. ಆದರೆ ಅಂದಿಗೂ, ಇಂದಿಗೂ ನನ್ನ ಹೃದಯದರಸಿ, ಮನದರಸಿ, ಈ ಹೃದಯ ಬಯಸಿ ಬಯಸಿ ಕರೆಯುವುದು ನಿನ್ನನ್ನೇ ಕಣೇ. 😍 ನಿನ್ನ ಹುಸಿಮುನಿಸಿಗೆ ಹಸಿ ಕಿಚ್ಚನಚ್ಚಿ ನನ್ನ ಪ್ರೀತಿಯನ್ನು ಇನ್ನೂ ಬೆಚ್ಚಗಿರಿಸುವ ಬಯಕೆಯಲಿ... ಅವರಿವರ ಹೆಸರು ಹೇಳಿ ಕೋಪ ಉಕ್ಕಿಸುವ ಪ್ರಯತ್ನ ಮಾಡುತ್ತೇನೆ. ನೀ ಮಾತ್ರ ನನ್ನ ಚಿತ್ತಚೋರಿ, ಅವರೆಲ್ಲರೂ ಸಹೋದರಿ. ಈ ಕ್ಷಣಗಳು ಹೀಗೆಯೇ ಇರಲಿ... ಕನಸಲೂ ನನ್ನ ಜೊತೆ ಮರೆಯದಿರಲಿ.. 😘 ನಾ ಊರಿಗೆ ಹೋದಾಗ, ಜೊತೆಯಲ್ಲಿ ಇರದಿದ್ದಾಗ ನನ್ನ ಬಿಟ್ಟು ನೀವು ಆರಾಮಾಗಿ ಇರುತ್ತೀರಲ್ಲವೇ ನೀ ಕೇಳುವಾಗ, ನಾ ಹೇಳಬೇಕೆನಿಸುತ್ತೆ, ನೀ ಸದಾ ಸನಿಹವೇ ಇರು ಎಂದು. ಆದರೇ ಕೆಲಸದೊತ್ತಡದಲಿ ನಿನ್ನ ಕ್ಷಣಮಾತ್ರಕೆ ನೆನೆಪಿನ ಹಿಂದೆ ಸರಿದಿದ್ದರೂ, ಮತ್ತೆ ಮತ್ತೇ ನೀ ಕಣ್ ರೆಪ್ಪೆಗಳಲಿ ಮೂಡಿಬರುವೆ ಒಲವೆ. ನೀ ದಿನವೂ ನನ್ನ ತಬ್ಬಿಹಿಡಿದು, ತೋಳುಗಳ ಮೇಲೆ ತಲೆಯಿಟ್ಟು ಮಲಗಿರುವಾಗ, ನೀ ಮಗುವಾಗಿ ಬಿಡುತ್ತೀಯಾ... ನಾ ತಂದೆಯಾಗಿರುತ್ತೇನೆ. ಅದೆಲ್ಲಾ ಹೃದಯದ ವಿಷಯ, ಮಾತಿನಲ್ಲಿ ಹೇಳಲಾಗದು. ಈಗಲೂ ನಿನ್ನ ಬಾಚಿ ತಬ್ಬಿ, ಮುತ್ತನೊತ್ತಿ, ಎದೆಮೇಲೆ ಮಲಗಿಸಿಕೊಳ್ಳುವ ಬಯಕೆ.
ಪ್ರತಿಯೊಬ್ಬ ಮನುಷ್ಯ ತನ್ನ ಭವಿಷ್ಯದ ದಿನಗಳ ಕುರಿತು ನಿತ್ಯವೂ ಅತಿ ಹೆಚ್ಚು ಖುಷಿಪಡುವ ಸಮಯವೆಂದರೆ ಈ ಸಮಯವೇ ಇರಬಹುದು. ನನ್ನ ನಿನ್ನ ಪ್ರೀತಿಗೆ ನೀ ನನಗೆ ಕೊಟ್ಟ ಕಾಣಿಕೆ ಹಾಗೂ ನಾ ನಿನಗೆ ಕೊಟ್ಟ ಕಾಣಿಕೆ ಎರಡೂ ಒಂದಾಗಿ ಆ ದೇವರೆ ಮಗುವಾಗಿ ನಿನ್ನ ಗರ್ಭಗುಡಿಯೊಳಗೆ ಪ್ರತಿಸ್ಥಾಪಿತನಾಗಿದ್ದಾನೆ. ಮುಂದಿನ ದಿನಗಳ ಖುಷಿಯ ನೆನೆದರೆ ಆ ಆನಂದಕೆ ಪಾರವಿರುವುದಿಲ್ಲ. ನೀನೆ ಹೇಳುವ ಹಾಗೆ ನಮ್ಮ ಮಗು ಒಳಗೆ ಆಡುತ್ತಿದ್ದಾನೆ, ನಿದಿರೆ ಮಾಡುತ್ತಿದ್ದಾನೆ.. ಮುಂದೆ ನಮ್ಮಿಬ್ಬರಿಗೂ ಹೆಸರು ತರುವ ಸಾಧನೆ ಮಾಡುವ ತಯಾರಿಲ್ಲಿದ್ದಾನೆ. ಇನ್ನು ಕೆಲವೇ ದಿನಗಳಲಿ ಅಂದರೆ ಸುಮಾರು 120 ದಿನಗಳಲಿ ಬಂಗಾರದ ಕನಸು ಕಣ್ತೆರದು ನನ್ನನು ಹಾಗೂ ನಿನ್ನನು ನೋಡಿ ಆತ್ಮಾಭಿಮಾನದಿಂದ ಮುಗ್ಧ ನಗು ನಗುವ ಸಮಯ ಬರುತ್ತದೆ. ಆ ಪುಟ್ಟ ಪುಟ್ಟ ಕೈ, ಪುಟ್ಟ ಪುಟ್ಟ ಕಾಲು, ಪುಟ್ಟ ಬಾಯಿ, ಪುಟ್ಟ ಮೂಗು, ಎಳೆಯ ಜೇನು ತುಟಿ, ಅದೆಷ್ಟು ಚಂದ ಅಲ್ವಾ. ಅದನ್ನು ನೋಡಿದರೆ ಜಗವೇ ಮರೆಯುತ್ತೆ. ಜಗ ಮರೆಯೋದೇನು...ನಮ್ಮ ಹೊಸ ಜಗತ್ತೇ ನಮ್ಮ ಕಂದ ಅಲ್ವಾ. 😍 😘 ಎಳೆಯ ಪಾದಗಳನ್ನು ಅಂಗೈಯಲಿ ಬಳಸಿ, ಕಾಲ್ಬೆರಳಿಗೆ ಮುತ್ತನ್ನೊತ್ತಿ, ಅಂಗಾಲಿಗೆ ದೃಷ್ಟಿ ಬೊಟ್ಟು ಇಟ್ಟು ನಲಿವ ದಿನದ ಕಾಯುವಿಕೆಯಲಿ ನಿತ್ಯವೂ ಖುಷಿಯಿದೆ... ಒಲವಿದೆ.. ಬಯಕೆಯೂ ಹೆಚ್ಚಾಗುತಿದೆ.
ಮಗು ಹುಟ್ಟಿದ ಮೇಲೆ ನಾವು ದೊಡ್ಡವರಾಗಿ ಬಿಡುತ್ತೇವೆ. ಜವಬ್ದಾರಿಗಳೂ ಹೆಚ್ಚಾಗುತ್ತದೆ. ಸಣ್ಣಪುಟ್ಟ ಸಮಸ್ಯೆಗಳು ಶುರುವಾಗುತ್ತವೆ. ಅದೆಲ್ಲವನ್ನೂ ಬುದ್ದಿವಂತಿಕೆಯಿಂದ ನಿಭಾಯಿಸುವ, ಸರಿದೂಗಿಸಲು ಆರ್ಥಿಕವಾಗಿ ಅನುಕೂಲವಾಗುವ ಶಕ್ತಿ ಆ ದೇವರು ನಮಗೆ ಪ್ರಸಾದಿಸಲಿ... ನಿನಗೂ ಇನ್ನೂ ಬುದ್ದೀ ನೀಡಲಿ.
ನನಗೆ ಕೋಪ ಕಡಿಮೆ. ಆಕಸ್ಮಾತ್ ಬಂದ್ರೆ ಒಮ್ಮೆಲೆ ಬಿರುಗಾಳಿಯಂತೆ ಬರುತ್ತೆ. ಆದರೆ ನನ್ನ ಸ್ವಾರ್ಥಕ್ಕಾಗಿ ಎಂದೂ ಯಾರ ಮೇಲೂ ರೇಗಿಲ್ಲ. ಹಾಗೂ ನಿನ್ನ ಮನಸಿಗೆ ಒಂದಷ್ಟು ನೋವು ಕೊಟ್ಟ ಕ್ಷಣಗಳಿದ್ದರೆ ಮರೆತುಬಿಡು. ನನ್ನ ಪ್ರೀತಿಯ ಮಾಧುರ್ಯವನ್ನು ಸವಿದು ನನ್ನ ಎದೆಯಲ್ಲಿ ಕರಗಿಬಿಡು.. ಜಂಭದಿಂದಲೇ ಹೇಳ್ತೀನಿ ಕೇಳು ಬಂಗಾರ... ನಾ ನಿನ್ನನೂ ಪ್ರೀತಿಸಲು ಶುರು ಮಾಡಿದ್ದು ಎರಡು ವರುಷದಿಂದಲ್ಲ, ಎರಡು ದಶಕಗಳಿಂದ ಅಂದರೆ ಸುಮಾರು 20 ವರುಷಗಳಿಂದ. ಅಂದಿನಿಂದಲೂ ನೀ ನನ್ನ ಭಾವ ಪರಪಂಚ.. my dream, my soul... I LOVE YOU... 😍 😍 😍 😘 😘 😘
ಬರಯಲೂ ಇನ್ನೂ ಇದೆ.... ಮುಗಿಸಲು ಮನಸಾಗುತ್ತಿಲ್ಲ.... ಒಲವೇ... ನನ್ನೊಲುಮೆ ಚಿಲುಮೆ... ಬಾ.... ನಿನಗಾಗಿ ಕಾಯುತ್ತಿರುವೆನು... ಅಪ್ಪಿಕೊಳ್ಳು, ಮುತ್ತಿಡು, ಎದೆಮೇಲೆ ಮಲಗಿಬಿಡು... 😍 😍 ಜೋ ಲಾಲಿ... ಬಂಗಾರ.. I LOVE U... 😍 😍
ಪ್ರೀತಿ
ನನ್ನವಳಿಗೊಂದು ಪತ್ರ
Nannavaligondu Patra
Raghavendra Padmashali
3 ನಿಮಿಷದ ಓದು1 ಓದುಗರು
ಪರಿಷ್ಕರಿಸಲಾಗಿದೆ:



